Publish Date: Fri, 06 Mar 2020 (11:21 IST)
Updated Date: Fri, 06 Mar 2020 (11:23 IST)
ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕು ಪಂಚಾಯಿತಿ ಅಧ್ಯಕ್ಷರ ಚುನಾವಣೆ ಹಿನ್ನಲೆ ಮೈಸೂರಿನ ಹೋಟೆಲ್ ನಲ್ಲಿ ಕಾಂಗ್ರೆಸ್ ಸದಸ್ಯರ ಜತೆಗಿದ್ದ ವಾಸಪ್ಪಗೌಡ ಎಸ್ಕೇಪ್ ಆಗಿದ್ದಾರೆ.
ಈ ಹಿಂದೆ ಬಿಜೆಪಿಯಿಂದ ಗೆದ್ದಿದ್ದ ವಾಸಪ್ಪಗೌಡ, ಬಳಿಕ ಕಾಂಗ್ರೆಸ್ ಪಕ್ಷದ ಬೆಂಬಲದಿಂದ ಅಧ್ಯಕ್ಷರಾಗಿದ್ದರು. ನಂತರದಲ್ಲಿ ಕಾಂಗ್ರೆಸ್ ನವರು ವಾಸಪ್ಪಗೌಡರ ಮನವೊಲಿಸಿದ್ದರಿಂದ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ನಲ್ಲಿದ್ದರು.
ಆದರೆ ಇದೀಗ ಮೈಸೂರಿನ ಹೋಟೆಲ್ ನಲ್ಲಿ ಕಾಂಗ್ರೆಸ್ ಸದಸ್ಯರ ಜತೆಗಿದ್ದ ವಾಸಪ್ಪಗೌಡ ಹೋಟೆಲ್ ನಿಂದ ಎಸ್ಕೇಪ್ ಆಗಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದಕಾರಣ ವಾಸಪ್ಪಗೌಡರನ್ನು ಬಿಜೆಪಿ ಸೆಳೆದಿರುವ ಬಗ್ಗೆ ಅನುಮಾವ ವ್ಯಕ್ತವಾಗಿದೆ.