Select Your Language

Notifications

webdunia
webdunia
webdunia
webdunia

ಈದ್ ಮಿಲಾದ್ ಮೆರವಣಿಗೆ ವೇಳೆ ಗಲಾಟೆ ಎಬ್ಬಿಸಿದವರಿಗೆ ಬಿಗ್ ಶಾಕ್‌

Eid Milad Procession
Photo Credit X
ಬೆಂಗಳೂರು: ನಡೆದ ಈದ್ ಮಿಲಾದ್  ಮೆರವಣಿಗೆ ವೇಳೆ ಬಸವನಗುಡಿಯಲ್ಲಿ ಎರಡು ಗುಂಪುಗಳ ನಡುವೆ ನಡೆದ ಮಾರಾಮಾರಿ ಪ್ರಕರಣ ಸಂಬಂಧ ಎಂಟು ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇನ್ನೂ ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸಲಾಗಿದೆ.  

ಬುಧವಾರ ಈದ್ ಮಿಲಾದ್ ಹಬ್ಬವಿದ್ದು, ಬೆಂಗಳೂರಿನ ನಾನಾ ಭಾಗಗಳಿಂದ ಮುಸ್ಲಿಮರು ಮೆರವಣಿಗೆಗಳಲ್ಲಿ ಬಂದು ಖುದ್ದೂಸ್ ಸಾಬ್ ಈದ್ಗಾ ಮೈದಾನಕ್ಕೆ ಸೇರುತ್ತಿದ್ದರು. 

ಬಸವನಗುಡಿಯ ಕೆ.ಆರ್ ರಸ್ತೆಯಲ್ಲಿ ಬನಶಂಕರಿ ಕಡೆಯಿಂದ ಮೆರವಣಿಗೆ ಮಾಡುತ್ತ ಬರುತ್ತಿದ್ದ ಗುಂಪು ಪುನೀತ್ ಕೆರೆಹಳ್ಳಿ ಆಫೀಸ್ ಬಳಿ ಬಂದಾಗ ಜೋರಾಗಿ ಘೋಷಣೆ ಕೂಗೋಕೆ ಶುರು ಮಾಡಿದೆ. 

ಈ ವೇಳೆ ಪುನೀತ್ ಕೆರೆಹಳ್ಳಿ & ಟೀಂ ಜೈ ಶ್ರೀರಾಮ್, ವಂದೇ ಮಾತರಂ ಎಂಬ ಘೋಷಣೆಗಳನ್ನು ಕೂಗಿದ್ದಾರೆ. ಈ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ.  

ಹಿಂದೂ-ಮುಸ್ಲಿಮರ ಗಲಾಟೆಯಲ್ಲಿ ಹಿಂದೂ ಕಾರ್ಯಕರ್ತಪುನೀತ್ ಗೌಡ ತಲೆಗೆ ಗಂಭೀರ ಹಲ್ಲೆ ನಡೆಸಲಾಗಿದೆ. ತಕ್ಷಣ ಸ್ಥಳದಲ್ಲಿದ್ದ ಪೋಲಿಸರು ಲಾಠಿ ಬೀಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಪುನೀತ್ ಕೆರೆಹಳ್ಳಿ ಗ್ಯಾಂಗ್ ಹಲ್ಲೆ ಮಾಡಿದವರನ್ನ ಬಂಧಿಸಬೇಕು ಎಂದು ರಸ್ತೆಯಲ್ಲಿ ಮಲಗಿ ಪ್ರತಿಭಟನೆ ನಡೆಸಿದರು. 

ಗಲಭೆಯಲ್ಲಿ ಭಾಗಿಯಾಗಿದ್ದ ಎರಡು ಗುಂಪುಗಳ ವಿರುದ್ಧ ಮೂರು ಎಫ್‌ಐಆರ್ ದಾಖಲಿಸಿ ಇಬ್ಬರು ಅಪ್ರಾಪ್ತರು ಸೇರಿದಂತೆ ಒಟ್ಟು ಎಂಟು ಜನರನ್ನು ಅರೆಸ್ಟ್ ಮಾಡಲಾಗಿದೆ ಎಂದು ತಿಳಿದುಬಂದಿದೆ.  

Share this Story:

Follow Webdunia kannada

ಮುಂದಿನ ಸುದ್ದಿ

ನೇಪಾಳ, ನೀವು ಒಬ್ಬಂಟಿಯಲ್ಲ, ಅಗತ್ಯ ಬಲದೊಂದಿಗೆ ನಾವು ಬರುತ್ತಿದ್ದೇವೆ: ಸೋನು ಸೂದ್