Select Your Language

Notifications

webdunia
webdunia
webdunia
webdunia

ನಾಮಪತ್ರ ತಿರಸ್ಕಾರಕ್ಕೆ ಹೆದರಿ ಕೋರ್ಟ ಮೊರೆ ಹೋದವಳಿಗೆ ಬಿಗ್ ಶಾಕ್!

ನಾಮಪತ್ರ ತಿರಸ್ಕಾರಕ್ಕೆ ಹೆದರಿ ಕೋರ್ಟ ಮೊರೆ ಹೋದವಳಿಗೆ ಬಿಗ್ ಶಾಕ್!
ಚಿತ್ರದುರ್ಗ , ಬುಧವಾರ, 22 ಆಗಸ್ಟ್ 2018 (14:45 IST)
ನಾಮಪತ್ರ ತಿರಸ್ಕಾರ ಮಾಡುತ್ತಾರೆ ಎಂದುಕೊಂಡು ನಿರೀಕ್ಷಣಾ ಆದೇಶ ನೀಡಲು ಕೋರ್ಟ್ ಮೆಟ್ಟಿಲೇರಿದ ಅಭ್ಯರ್ಥಿಗೆ ನ್ಯಾಯಾಲಯ ಚೀಮಾರಿ ಹಾಕಿದೆ.

ತಮ್ಮ ನಾಮಪತ್ರ ತಿರಸ್ಕಾರ ಮಾಡುತ್ತಾರೆ ಎಂದುಕೊಂಡು ಕೋರ್ಟ ಮೆಟ್ಟಿಲೇರಿದ್ದವರಿಗೆ ನ್ಯಾಯಾಲಯ ಛೀಮಾರಿ ಹಾಕಿದೆ. ಅಷ್ಟೇ ಅಲ್ಲ 50 ಸಾವಿರ ರೂ. ದಂಡ ವಿಧಿಸಿದೆ. ಹೈಕೋರ್ಟ್ ಏಕಸದಸ್ಯ ಪೀಠದಿಂದ 50 ಸಾವಿರ ರೂ. ದಂಡ ವಿಧಿಸಿ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ನಗರಸಭೆ 22ವಾರ್ಡ್ ಗೆ ಸ್ಪರ್ಧಿಸಿದ್ದ ಪುಷ್ಪಾ ಸಂಜೀವಮೂರ್ತಿ ದಂಡದ ಶಿಕ್ಷೆಗೆ ಗುರಿಯಾದವರು.
ಸುಳ್ಳು ವಾಸಸ್ಥಳ ದೃಢೀಕರಣ ಪ್ರಮಾಣ ಪತ್ರ ಸಲ್ಲಿಸಿದ್ದ ಅಭ್ಯರ್ಥಿ ಪುಷ್ಪಾ ವಿಚಾರಣೆ ವೇಳೆ ಸಿಕ್ಕಿಬಿದ್ದಿದ್ದಾರೆ. ವಿಚಾರಣೆ ನಡೆಸಿ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವೀರಪ್ಪ ವಜಾಗೊಳಿಸಿದ್ದಾರೆ. ನಕಲಿ ದಾಖಲೆ ಸಲ್ಲಿಸಿ ವಾಸಸ್ಥಳ ದೃಢೀಕರಣ ಪತ್ರವನ್ನು ಪುಷ್ಪಾ ಪಡೆದಿದ್ದರು. ಅಕ್ರಮವಾಗಿ ದೃಢೀಕರಣ ಪತ್ರ ಪಡೆದಿರುವ ಬಗ್ಗೆ ತನಿಖೆ ನಡೆಸಲು ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ.

ತಪ್ಪಿತಸ್ಥರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಿ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆಯೂ ಸಹ ನ್ಯಾಯಾಲಯ ಸೂಚನೆ ನೀಡಿದೆ.





Share this Story:

Follow Webdunia kannada

ಮುಂದಿನ ಸುದ್ದಿ

ಕೇರಳದ ದೇವಸ್ಥಾನ ಸ್ವಚ್ಛತಾ ಕಾರ್ಯದಲ್ಲಿ ಕೈ ಜೋಡಿಸಿದ ಮುಸ್ಲಿಂ ಯುವಕರು