Publish Date: Sat, 09 May 2020 (09:28 IST)
Updated Date: Sat, 09 May 2020 (09:29 IST)
ಕಲಬುರಗಿ : ಕೊರೊನಾ ಹಾಟ್ ಸ್ಪಾಟ್ ಆದ ಕಲಬುರಗಿ ಜನತೆಗೆ ಮತ್ತೆ ಬಿಗ್ ಶಾಕ್ ವೊಂದು ಎದುರಾಗಿದೆ.
ರಾಜ್ಯದಲ್ಲಿ ಕೊರೊನಾ ಮೊದಲ ಬಲಿ ಪಡೆದ ಕಲಬುರಗಿಯಲ್ಲಿ ದಿನೇ ದಿನೇ ಕೊರೊನಾ ಅಟ್ಟಹಾಸ ಹೆಚ್ಚಾಗುತ್ತಿದ್ದು, ಇದೀಗ ಲಾರಿ ಚಾಲಕನೊಬ್ಬನಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ.
ಆದಕಾರಣ ಲಾರಿ ಚಾಲಕ ಸೇಡಂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಾಲಕನಿಂದಾಗಿ ಆಸ್ಪತ್ರೆ ಸೀಲ್ ಡೌನ್ ಮಾಡಲಾಗಿದೆ. ಹಾಗೇ ಆತನ ಸಂಪರ್ಕದಲ್ಲಿದ್ದ 50 ಜನರಿನ್ನು ಕ್ವಾರಂಟೈನ್ ನಲ್ಲಿಡಲಾಗಿದೆ.