Daily Horoscope

Select Your Language

Notifications

webdunia
webdunia
webdunia
webdunia

ಸಿಎಂ ಡಿಕೆ ಶಿವಕುಮಾರ್ ಬರುತ್ತಾರೆಂದು ಮಂಗಳೂರು ತುಂಬಾ ಪೇಂಟಿಂಗ್, ಕ್ಲೀನಿಂಗ್: ಅಬ್ಬಬ್ಬಾ ತಯಾರಿ ಒಂದಾ ಎರಡಾ video

CM DK Shivakumar
Photo Courtesy X
ಮಂಗಳೂರು: ಕರಾವಳಿ ನಗರಿಯಲ್ಲಿ ಇದೇ ಮೊದಲ ಬಾರಿಗೆ ಸಂಪುಟ ಸಭೆ ನಡೆಸಲು ಬಂದಿರುವ ಸಿಎಂ ಡಿಕೆ ಶಿವಕುಮಾರ್ ಗಾಗಿ ಇಡೀ ಮಂಗಳೂರು ನಗರವನ್ನೇ ಶೃಂಗರಿಸಲಾಗಿದೆ.
 
ಕಳೆದ ಒಂದು ವಾರದಿಂದ ಸಿಎಂ ಭೇಟಿಗಾಗಿ ನಗರದಲ್ಲಿ ತಯಾರಿ ಆರಂಭವಾಗಿತ್ತು. ರಸ್ತೆ ಬದಿಯಲ್ಲಿದ್ದ ಕಸ, ಕೊಳೆಯನ್ನು ಕ್ಲೀನಿಂಗ್ ಮಾಡಲಾಗಿತ್ತು. ಅಲ್ಲದೆ, ರಸ್ತೆಗಳನ್ನೆಲ್ಲಾ ಸರಿಪಡಿಸಿ ಅಕ್ಕಪಕ್ಕದ ಗೋಡೆಗಳಿಗೆ ಸುಣ್ಣ ಬಣ್ಣ ಬಳಿಯಲಾಗಿದೆ.
 
ವಿಶೇಷವಾಗಿ ಏರ್ ಪೋರ್ಟ್ ನಿಂದ ತೆರಳುವ ರಸ್ತೆಯನ್ನು ಸಂಪೂರ್ಣವಾಗಿ ಸುವ್ಯವಸ್ಥೆಗೊಳಿಸಲಾಗಿತ್ತು. ಇನ್ನು, ಸಿಎಂ ಬರುತ್ತಿರುವ ಹಿನ್ನಲೆಯಲ್ಲಿ ನಿನ್ನೆ ರಸ್ತೆ ಸಂಚಾರಕ್ಕೂ ನಿರ್ಬಂಧ ವಿಧಿಸಲಾಗಿತ್ತು. ಸಿಎಂ ಬರುತ್ತಿರುವ ವಿಚಾರ ತಿಳಿದು ಸಾಕಷ್ಟು ಜನ ರಸ್ತೆ ಬದಿ ನಿಂತು ಸ್ವಾಗತ ಕೋರಿದ್ದಾರೆ.
 
ಸಿಎಂ ಆಗಮನ ಹಿನ್ನಲೆಯಲ್ಲಿ ಇಡೀ ಮಂಗಳೂರಿನಲ್ಲಿ ಖಾಕಿ ಸರ್ಪಗಾವಲು ಹಾಕಿದೆ. ರಸ್ತೆಯ ಇಕ್ಕೆಲೆಗಳಲ್ಲಿ ಬೃಹತ್‍ ಬ್ಯಾನರ್, ಕಾಂಗ್ರೆಸ್ ಪಕ್ಷದ ಬಾವುಟಗಳ ತೋರಣ ಕಟ್ಟಿ ಸಿಂಗರಿಸಲಾಗಿದೆ. ಪೇಂಟಿಂಗ್, ಕ್ಲೀನಿಂಗ್ ಎಂದು ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗಿದೆ. ಇಂದಿನ ಕ್ಯಾಬಿನೆಟ್ ಸಭೆಯಲ್ಲಿ ಕರಾವಳಿಗೆ ಬಂಪರ್ ಕೊಡುಗೆ ನೀಡುವ ನಿರೀಕ್ಷೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕರಾವಳಿಯಲ್ಲಿ ಮೊದಲ ಬಾರಿಗೆ ರಾಜ್ಯ ಸಂಪುಟ ಸಭೆ: ಪಡಿಲ್‌ನ ಪ್ರಜಾಸೌಧದಲ್ಲಿ ಡಿಕೆ ಶಿವಕುಮಾರ್‌ ನೇತೃತ್ವದಲ್ಲಿ ಮಹತ್ವದ ತೀರ್ಮಾನ