Webdunia - Bharat's app for daily news and videos

Install App

Big Breaking:ಹತ್ತಿರದಿಂದ ಕೊಹ್ಲಿ ನೋಡುವ ಖುಷಿಯಲ್ಲಿದ್ದ ಆರ್‌ಸಿಬಿ ಫ್ಯಾನ್ಸ್‌ ಬಿಗ್‌ಶಾಕ್‌

Sampriya
ಬುಧವಾರ, 4 ಜೂನ್ 2025 (13:50 IST)
Photo Credit X
ಬೆಂಗಳೂರು: ಮುಂಜಾಗೃತ ಹಿನ್ನೆಲೆ ತೆರೆದ ಬಸ್‌ನಲ್ಲಿ ಆರ್‌ಸಿಬಿ ವಿಜಯೋತ್ಸವ ಇಲ್ಲ. ಆರ್‌ಸಿಬಿ ಆಟಗಾರರು ಬಸ್ಸಿನಲ್ಲಿ ಬಂದು ಬಸ್ಸಿನಲ್ಲಿ ಹೋಗುತ್ತಾರೆ ಎಂದು ಗೃಹಸಚಿವ ಜಿ ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ. ಈ ಮೂಲಕ ಕೊಹ್ಲಿ ಹಾಗೂ ಆರ್ಸಿಬಿ ಆಟಗಾರರನ್ನು ಹತ್ತಿರದಿಂದ ನೋಡಬೇಕೆಂದು ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ. 

ವಿಧಾನಸೌಧದಲ್ಲಿ ಸಂಜೆ ಕಾರ್ಯಕ್ರಮ ನಡೆಯಲಿರುವ ಹಿನ್ನೆಲೆ ಗ್ರ‍್ಯಾಂಡ್ ಸ್ಟೆಪ್ ಬಳಿ ಸಿದ್ಧತೆ ವೀಕ್ಷಣೆ ಮಾಡಿದ ಬಳಿಕ ಪರಮೇಶ್ವರ್ ಮಾಧ್ಯಮಗಳೊಂದಿಗೆ ಮಾತನಾಡಿದರು. 
ಗೃಹ ಇಲಾಖೆ ಒಪ್ಪದ ಕಾರಣ ಪರೇಡ್‌ಗೆ ಬ್ರೇಕ್ ಹಾಕಲಾಗಿದೆ. ಪೊಲೀಸ್ ಕಮೀಷನರ್ ಪರೇಡ್‌ಗೆ ಒಪ್ಪಿಲ್ಲ. ವಿಧಾನಸೌಧ ಹಾಗೂ ಹೈಕೋರ್ಟ್ ಭದ್ರತೆ ದೃಷ್ಟಿಯಿಂದ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು. 


ವಿಕ್ಟರಿ ಪರೇಡ್‌ಗೆ ಲಕ್ಷಾಂತರ ಜನರು ಸೇರುವುದರಿಂದ ನಿರ್ವಹಣೆ ಕಷ್ಟ. ನಗರದ ಹೃದಯ ಭಾಗದಲ್ಲಿ ಟ್ರಾಫಿಕ್ ಸಮಸ್ಯೆ ಆಗಲಿದೆ. ವಿಧಾನಸೌಧ, ಹೈಕೋರ್ಟ್ ಸೇರಿದಂತೆ ಪ್ರಮುಖ ಸರ್ಕಾರಿ ಕಟ್ಟಡಗಳಿವೆ. ಆದ್ದರಿಂದ ಸೂಕ್ತ ಭದ್ರತೆ ಕಷ್ಟ ಎಂದು ಪೊಲೀಸ್ ಇಲಾಖೆ ಹೇಳಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಾನು ದಲಿತ ವಿರೋಧಿಯಲ್ಲ, ತಪ್ಪಾಗಿದ್ದರೆ ಕ್ಷಮಿಸಿ ಎಂದ ಜಿಟಿ ದೇವೇಗೌಡ

ಬಿಜೆಪಿ ಮತಕಳ್ಳತನದಿಂದ ಅಧಿಕಾರ ಉಳಿಸಿಕೊಂಡಿದೆ: ಪ್ರಿಯಾಂಕಾ ಗಾಂಧಿ ಕಿಡಿ

ಮಹಾತ್ಮ ಗಾಂಧೀಜಿ ಮೇಲೂ ಆರ್‌ಎಸ್‌ಎಸ್ ಅದೇ ತಂತ್ರವನ್ನು ಹೆಣೆದಿತ್ತು: ರಾಹುಲ್ ಗಾಂಧೀಜಿ

ಬೀದಿ ನಾಯಿ ಪ್ರಕರಣದಲ್ಲಿ ಸುಪ್ರೀಂ ತೀರ್ಪುನ ಬಳಿಕ ಕ್ರಮಕ್ಕೆ ಮುಂದಾದ ಸರ್ಕಾರ

ಕಲಾಸಿಪಾಳ್ಯ: ಕೇಸರಿ ಶಾಲು ಧರಿಸಿದ್ದಕ್ಕೆ ಹಿಗ್ಗಾಮುಗ್ಗಾ ಥಳಿತ, ತನಿಖೆಯಲ್ಲಿ ಭಾರೀ ಬೆಳವಣಿಗೆ

ಮುಂದಿನ ಸುದ್ದಿ