Select Your Language

Notifications

webdunia
webdunia
webdunia
webdunia

ಬೀದರ್ ವಿಮಾನ ಪುನರಂಭ

ಬೀದರ್ ವಿಮಾನ ಪುನರಂಭ
ಬೆಂಗಳೂರು , ಗುರುವಾರ, 24 ಫೆಬ್ರವರಿ 2022 (14:24 IST)
ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಸಿಹಿಸುದ್ದಿ. ಬೀದರ್ ವಿಮಾನ ನಿಲ್ದಾಣ ಮತ್ತೆ ಕಾರ್ಯಾರಂಭ ಮಾಡಲಿದೆ.
ಬೀದರ್-ಬೆಂಗಳೂರು ವಿಮಾನ ಸೇವೆ ಗುರುವಾರದಿಂದ ಪುನಃ ಆರಂಭವಾಗಲಿದೆ.
 
ಕೋವಿಡ್ ಪರಿಸ್ಥಿತಿ ಮತ್ತು ಇತರ ಕಾರಣಗಳಿಂದಾಗಿ ಬೀದರ್‌ನಿಂದ ವಿಮಾನ ಹಾರಾಟ ಸ್ಥಗಿತವಾಗಿತ್ತು. 24/2/2022ರ ಗುರುವಾರದಿಂದ ವಿಮಾನ ಸೇವೆ ಮತ್ತೆ ಆರಂಭಗೊಳ್ಳಲಿದೆ. ಇದರಿಂದಾಗಿ ಜನರು ರಾಜಧಾನಿ ಬೆಂಗಳೂರಿಗೆ ಬರಲು ಸಹಾಯಕವಾಗಲಿದೆ.
ವಾರದಲ್ಲಿ ಮೂರು ದಿನ (ಮಂಗಳವಾರ, ಗುರುವಾರ ಮತ್ತು ರವಿವಾರ) ಬೀದರ್-ಬೆಂಗಳೂರು ವಿಮಾನ ಹಾರಾಟನಡೆಸಲಿದೆ. ಪ್ರಯಾಣಿಕರು ಈ ಸೇವೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವೃದ್ಧ ಮಹಿಳೆಗೆ ಕಿರುಕುಳ: ಆಸ್ಪತ್ರೆಗೆ ಸಿಬ್ಬಂದಿ ಅರೆಸ್ಟ್