Publish Date: Tue, 08 Jan 2019 (07:56 IST)
Updated Date: Tue, 08 Jan 2019 (07:58 IST)
ಬೆಂಗಳೂರು : ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹಲವು ಸಂಘಟನೆಗಳು ಇಂದು ಹಾಗೂ ನಾಳೆ ಒಟ್ಟು ಎರಡು ದಿನಗಳ ಕಾಲ 'ಭಾರತ್ ಬಂದ್' ಗೆ ಕರೆ ಕೊಟ್ಟಿರುವ ಹಿನ್ನಲೆಯಲ್ಲಿ ವಿವಿ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂಬುದಾಗಿ ತಿಳಿದುಬಂದಿದೆ.
ಬೆಂಗಳೂರು ವಿವಿ, ರಾಣಿ ಚೆನ್ನಮ್ಮ ವಿವಿ, ಕರ್ನಾಟಕ ವಿವಿ, ಹಂಪಿ ಕನ್ನಡ ವಿವಿ, ಕುವೆಂಪು ವಿವಿ, ದಾವಣಗೆರೆ ವಿವಿ, ಗಂಗೂಬಾಯಿ ಹಾನಗಲ್ ವಿವಿ ಪರೀಕ್ಷೆಗಳು ಇಂದು ನಡೆಯಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಬೆಂಗಳೂರು ವಿವಿಯ ಕಾನೂನು, ದೈಹಿಕ ಪರೀಕ್ಷೆ, ರಾಣಿ ಚೆನ್ನಮ್ಮ ವಿವಿಯ ಎಲ್ಲಾ ಪರೀಕ್ಷೆಗಳು, ಹಂಪಿ ಕನ್ನಡ ವಿವಿ, ಕರ್ನಾಟಕ ವಿವಿಯ ಎಂಎ, ಎಂಕಾಂ, ಎಂಎಸ್ಸಿ ಸ್ನಾತಕೋತ್ತರ ಪರೀಕ್ಷೆಗಳು ಇವತ್ತು ನಡೆಯಲ್ಲ. ಹಾಗೇ ಕುವೆಂಪು ವಿವಿಯ ಬಿಎಡ್ ಪರೀಕ್ಷೆ, ತುಮಕೂರು ವಿವಿಯ ಎಂಬಿಎ, ಎಂಕಾಂ, ಎಂಎ ಪರೀಕ್ಷೆ ಮುಂದೂಡಿಕೆ ಮಾಡಲಾಗಿದೆ. ದಾವಣಗೆರೆ ವಿವಿ, ಗಂಗೂಬಾಯಿ ಹಾನಗಲ್ ವಿವಿ ಪರೀಕ್ಷೆಗಳು ಸಹ ನಡೆಯಲ್ಲ ಎಂಬುದಾಗಿ ತಿಳಿದುಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.