ಕೊರೋನಾವೈರಸ್ ನಿಂದ ಆದ ಲಾಭವೇನು ಗೊತ್ತಾ?!

ಬುಧವಾರ, 25 ಮಾರ್ಚ್ 2020 (09:24 IST)
ಬೆಂಗಳೂರು: ಕೊರೋನಾವೈರಸ್ ಇಡೀ ಮನುಕುಲಕ್ಕೇ ಸವಾಲಾಗಿದೆ. ಇದರಿಂದಾಗಿ ಇಡೀ ವಿಶ್ವವೇ ಲಾಕ್ ಡೌನ್ ಮಾಡಿ ಕುಳಿತಿದೆ. ಇಂತಹ ಸಂದರ್ಭದಲ್ಲಿಯೂ ಈ ರೋಗ ಮಾಡಿದ ಲಾಭವೇನು ಗೊತ್ತಾ?


ಕೊರೋನಾವೈರಸ್ ಹರಡುವಿಕೆ ತಡೆಗಟ್ಟಲು ನಗರಗಳು ಸಂಪೂರ್ಣವಾಗಿ ಸ್ತಬ್ಧವಾಗಿದೆ. ಸದಾ ವಾಹನಗಳಿಂದ ಗಿಜಿಗುಟ್ಟುವ ಬೆಂಗಳೂರಿನಂತಹ ನಗರಗಳಲ್ಲಿ ಇದರಿಂದಾಗಿ ವಾಯು ಮಾಲಿನ್ಯ ಮಿತಿ ಮೀರಿತ್ತು.

ಒಂದು ವಾರ ಕಾಲ ಈ ರೀತಿ ವಾಹನ ದಟ್ಟಣೆ ಕಡಿಮೆಯಾಗುವುದರಿಂದ ವಾಯು ಮಾಲಿನ್ಯ ನಿಯಂತ್ರಣಕ್ಕೆ ಬರಲಿದೆ. ಅದೇ ರೀತಿ ವಾಹನ ಅಪಘಾತಗಳ ಸಂಖ್ಯೆಯೂ ಕಡಿಮೆಯಾಗಲಿದೆ. ಇದು ಎರಡು ಲಾಭ ಬಿಟ್ಟರೆ ಜನರಿಗೆ ಉಳಿದೆಲ್ಲಾ ರೀತಿಯಿಂದಲೂ ಇದು ಕಂಟಕವೇ ಸರಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕೊರೋನಾ ಬಳಿಕ ಜನರ ಹಂಟ್ ಮಾಡಲು ಬರ್ತಿದೆ ‘ಹ್ಯಾಂಟಾ’ ವೈರಸ್!