Select Your Language

Notifications

webdunia
webdunia
webdunia
webdunia

ಸಾವಿರ ರೂ ಕೊಡ್ತೀನಿ, ಬರ್ತೀಯಾ ಎಂದು ಮಧ್ಯರಾತ್ರಿ ಮಂಚಕ್ಕೆ ಕರೆದ ಭೂಪ: ಮಹಿಳೆಯ ರಿಯಾಕ್ಷನ್ ಏನಿತ್ತು ಗೊತ್ತಾ Video

Bengaluru man harasses woman
Photo Credit: X
ಬೆಂಗಳೂರಿನಲ್ಲಿ ಕಚೇರಿಗೆ ತೆರಳಲು ಕ್ಯಾಬ್‌ಗಾಗಿ ಕಾಯುತ್ತಿದ್ದ ಯುವತಿಗೆ ಅಶ್ಲೀಲವಾಗಿ ಮಾತನಾಡಿ, ಕಿರುಕುಳ ನೀಡಿದ್ದ 42 ವರ್ಷದ ವಿಕೃತ ಕಾಮುಕನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
 
ಬಂಧಿತ ಆರೋಪಿಯನ್ನು ಎನ್‌ಆರ್‌ಐ ಲೇಔಟ್ ನಿವಾಸಿ, ಹಣ್ಣು ಮಾರಾಟಗಾರ ವಿಜಯ್ ರಾಘವ್ ಎಂದು ಗುರುತಿಸಲಾಗಿದೆ.
 
ಕಚೇರಿಗೆ ಹೊರಟಿದ್ದ ಯುವತಿಯೊಬ್ಬಳು ರಸ್ತೆಯಲ್ಲಿ ಕ್ಯಾಬ್‌ಗಾಗಿ ಕಾಯುತ್ತಿದ್ದಾಗ, ದ್ವಿಚಕ್ರ ವಾಹನದಲ್ಲಿ ಬಂದ ವಿಜಯ್ ರಾಘವ್ ಆಕೆಯನ್ನು ಹಿಂಬಾಲಿಸಿ ಅಶ್ಲೀಲವಾಗಿ ಮಾತನಾಡಿದ್ದಾನೆ. ವೈರಲ್ ವಿಡಿಯೋ ಸಾಕ್ಷಿ: ಆರೋಪಿ ತನಗೆ ಕಿರುಕುಳ ನೀಡುತ್ತಾ, "ನಿನ್ನ ದರ ಎಷ್ಟು?" ಎಂದು ಶೋಷಣೆ ಮಾಡಲು ಯತ್ನಿಸಿದಾಗ, ಧೈರ್ಯಗೆಡದ ಯುವತಿ ತಕ್ಷಣವೇ ತನ್ನ ಮೊಬೈಲ್ ಫೋನ್‌ನಲ್ಲಿ ಆತನ ವಿಕೃತ ವರ್ತನೆಯನ್ನು ವಿಡಿಯೋ ಮಾಡಿಕೊಂಡಿದ್ದಳು.
 
ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ: ಯುವತಿ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಬೆಂಗಳೂರು ನಗರ ಪೊಲೀಸರಿಗೆ ಟ್ಯಾಗ್ ಮಾಡಿ ದೂರು ನೀಡಿದ್ದರು. ವಿಡಿಯೋ ತೀವ್ರವಾಗಿ ವೈರಲ್ ಆಗಿ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿತ್ತು.
 
ವಿಡಿಯೋ ಮತ್ತು ದೂರು ಆಧಾರಿಸಿ ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯ ಪೊಲೀಸರು, ಸಿಸಿಟಿವಿ ಮತ್ತು ಬೈಕ್ ನಂಬರ್ ಆಧಾರದ ಮೇಲೆ ಆರೋಪಿ ವಿಜಯ್ ರಾಘವ್‌ನನ್ನು ವಶಕ್ಕೆ ಪಡೆದು ಕಾನೂನು ಕ್ರಮ ಜರುಗಿಸಿದ್ದಾರೆ. ಸಂಕಷ್ಟದ ಸಮಯದಲ್ಲಿ ಧೈರ್ಯ ಕಳೆದುಕೊಳ್ಳದೆ ಆರೋಪಿಯ ವಿಡಿಯೋ ಮಾಡಿ ಪೊಲೀಸರಿಗೆ ದೂರು ನೀಡಿದ ಯುವತಿಯ ಧೈರ್ಯಕ್ಕೆ ನೆಟ್ಟಿಗರು ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
pic.twitter.com/opQBXSJDGl

 

— TOI Bengaluru (@TOIBengaluru) July 28, 2026

Share this Story:

Follow Webdunia kannada

ಮುಂದಿನ ಸುದ್ದಿ

ಕೆಪಿಎಸ್‌ಸಿ ಸೇರಿದಂತೆ ಎಲ್ಲಾ ನೇಮಕಾತಿ ಅಕ್ರಮಗಳನ್ನು ಸಿಬಿಐ ತನಿಖೆಗೆ ವಹಿಸಬೇಕು: ಬಿ.ವೈ. ವಿಜಯೇಂದ್ರ