2014ರಲ್ಲಿ ಪ್ರಾಯೋಗಿಕವಾಗಿ ಎಲೆಕ್ಟ್ರಿಕ್ ಬಸ್ ಸಂಚಾರ ನಡೆಸಿ ದುಬಾರಿ ವೆಚ್ಚದ ಹಿನ್ನೆಲೆಯಲ್ಲಿ ಯೋಜನೆಯನ್ನು ಕೈ ಬಿಟ್ಟಿದ್ದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮತ್ತೀಗ ಆದಷ್ಟು ಬೇಗ 150 ಎಲೆಕ್ಟ್ರಿಕ್ ಬಸ್‌ಗಳನ್ನು ರಸ್ತೆಗಿಳಿಸಲು ನಿರ್ಧರಿಸಿದೆ.
ಈ ಮೂಲಕ ನಗರ ಸಾರಿಗೆಗೆ ಎಲೆಕ್ಟ್ರಿಕ್ ಬಸ್‌ಗಳನ್ನು ರಸ್ತೆಗಿಳಿಸಿದ ದೇಶದ ಮೊದಲ ನಗರ ಎಂಬ ಕೀರ್ತಿಗೆ ಬೆಂಗಳೂರು ಪಾತ್ರವಾಗಲಿದೆ.
ಎಲೆಕ್ಟ್ರಿಕ್ ಬಸ್ ಬಳಕೆಗೆ ಶುಕ್ರವಾರ ಅನುಮತಿ ನೀಡಲಾಗಿದೆ. ಇದು ಭವಿಷ್ಯದ ಸಮೂಹ ಸಾರಿಗೆ. ಮುಂದಿನ ದಿನಗಳಲ್ಲಿ ನಾವು ಇಂಧನಗಳ ಬಳಕೆಯನ್ನು ನೆಚ್ಚಿಕೊಂಡಿರಲಾಗದು. ಎಲೆಕ್ಟ್ರಿಕ್ ಬಸ್‌ಗಳು ಮಾಲಿನ್ಯ ಮುಕ್ತವಾಗಿದ್ದು, ಪೆಟ್ರೋಲ್, ಡೀಸೆಲ್ ವಾಹನಗಳಿಗೆ ಹೋಲಿಸಿದರೆ ಇವುಗಳ ನಿರ್ವಹಣೆ ಮತ್ತು ತಾಂತ್ರಿಕ ವೆಚ್ಚ ಸಹ ಕಡಿಮೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಾದ ಏಕರೂಪ್ ಕೌರ್ ತಿಳಿಸಿದ್ದಾರೆ.