ಬಲಪಂಥೀಯ ಸಂಘಟನೆಗಳು ಭಾರತೀಯ ಸೇನೆಯ ಸೀಮಿತ ದಾಳಿಯನ್ನು 'ಮತಗಳು' ಮತ್ತು 'ಹಣ' ಗಳಿಕೆಗಾಗಿ ಬಳಸಲು ಯತ್ನಿಸುತ್ತಿವೆ. ಕೀಳು ರಾಜಕೀಯಕ್ಕೆ ಸೇನೆಯನ್ನು ಎಳೆಯಬೇಡಿ ಎಂದುರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಗುಡುಗಿದ್ದಾರೆ.
ಕೆಲವರು ಭಾರತೀಯ ಸೇನೆಯ ಹೆಸರಲ್ಲಿ ಮತಗಳನ್ನು ಕೇಳುತ್ತಿದ್ದರೆ, ಕೆಲವರು ನೋಟುಗಳನ್ನು ಕೇಳುತ್ತಿದ್ದಾರೆ. ಭಾರತೀಯ ಸೇನೆಯನ್ನು ರಾಜಕೀಯಕ್ಕೆ ಎಳೆಯುವ ಮೂಲಕ ಬಿಜೆಪಿ ಅತ್ಯಂತ ಕೀಳುಮಟ್ಟದ ರಾಜಕೀಯ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಲಪಂಥೀಯ ಸಂಘಟನೆಗಳೇ ನಾಚಿಕೆಯಾಗುವುದಿಲ್ಲವೇ? ನಿಮಗೆ ಗೋವು ಮತ್ತು ರಾಮಮಂದಿರದಿಂದ ಹೊಟ್ಟೆ ತುಂಬಿಲ್ಲವಾ? ಕನಿಷ್ಠ ಸೇನೆಯನ್ನಾದರೂ ರಾಜಕೀಯದಿಂದ ದೂರವಿಡಿ ಎಂದು ಲಾಲು ಟ್ವೀಟ್ ಮಾಡಿದ್ದಾರೆ.
ಒಂದು ವೇಳೆ, ಪಾಕಿಸ್ತಾನದ ಕಲಾವಿದರನ್ನು ಹಾಕಿಕೊಂಡು ಸಿನೆಮಾ ಮಾಡಿದಲ್ಲಿ 5 ಕೋಟಿ ರೂಪಾಯಿಗಳ ಹಣವನ್ನು ಸೇನೆಗೆ ನೀಡಬೇಕು ಎನ್ನುವ ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ.
ಬಲಪಂಥೀಯ ಸಂಘಟನೆಗಳು ವಿಶ್ವದಲ್ಲಿಯೇ ಅತಿಶ್ರೇಷ್ಠವಾದ ಭಾರತೀಯ ಸೇನೆಯನ್ನು ಕೂಡಾ ರಾಜಕೀಯಕ್ಕೆ ಬಳಸಿಕೊಳ್ಳುವ ಷಡ್ಯಂತ್ರ ರೂಪಿಸಿದೆ ಎಂದು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಆರೋಪಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ