Select Your Language

Notifications

webdunia
webdunia
webdunia
webdunia

ದೇಶದ ಪ್ರಥಮ ಮಹಿಳಾ ಕ್ಯಾಬ್ ಚಾಲಕಿ ಅನುಮಾನಾಸ್ಪದ ಸಾವು

ದೇಶದ ಪ್ರಥಮ ಮಹಿಳಾ ಕ್ಯಾಬ್ ಚಾಲಕಿ ಅನುಮಾನಾಸ್ಪದ ಸಾವು
ಬೆಂಗಳೂರು , ಮಂಗಳವಾರ, 28 ಜೂನ್ 2016 (09:16 IST)
ದೇಶದ ಪ್ರಥಮ ಮಹಿಳಾ ಕ್ಯಾಬ್ ಚಾಲಕಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಭಾರತಿ(40) ತಮ್ಮ ಬಾಡಿಗೆ ಮನೆಯಲ್ಲಿ ಶಂಕಾಸ್ಪದ ಸ್ಥಿತಿಯಲ್ಲಿ ಸೋಮವಾರ ಶವವಾಗಿ ಪತ್ತೆಯಾಗಿದ್ದಾರೆ. ಸಂಜಯನಗರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
 
ನಾಗಶೆಟ್ಟಿಹಳ್ಳಿಯಲ್ಲಿರುವ ತಮ್ಮ ನಿವಾಸದಲ್ಲಿ ಅವರು ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
 
ಕ್ಯಾಬ್ ಎರಡು ದಿನಗಳಿಂದ ಮನೆ ಹೊರಗೆ ನಿಂತಿದ್ದು, ಆಕೆ ಮಾತ್ರ ಕಾಣಿಸದಾದಾಗ ಮನೆ ಮಾಲೀಕ ಮೂರನೆಯ ಮಹಡಿಯಲ್ಲಿ ಆಕೆ ವಾಸವಾಗಿದ್ದ ಮನೆಯ ಕಿಟಕಿ ಹೊರಗಿನಿಂದ ಇಣುಕಿ ನೋಡಿದ್ದಾನೆ.ಆಗ ಆಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಆದರೆ ಅದಾಗಲೇ ಮೃತ ಪಟ್ಟಿರುವುದು ತಿಳಿದು ಬಂದಿದೆ.   
 
ಆಕೆ ನಗರದಲ್ಲಿ ಏಕಾಂಗಿಯಾಗಿ ವಾಸವಾಗಿದ್ದು ತನ್ನ ತವರು ಆಂಧ್ರಪ್ರದೇಶಕ್ಕೆ ಹಿಂತಿರುಗುವ ಉದ್ದೇಶ ಹೊಂದಿದ್ದಳು ಎಂದು ತಿಳಿದು ಬಂದಿದೆ. ಮೇಲ್ನೋಟಕ್ಕೆ ಇದು ಆತ್ಮಹತ್ಯೆಯಂತೆ ತೋರುತ್ತಿದ್ದರೂ ಮನೆ ಬಾಗಿಲು ಲಾಕ್ ಆಗದೇ ಇದ್ದುದು ಅನುಮಾನವನ್ನು ಮೂಡಿಸುವಂತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜತೆಗೆ ಸ್ಥಳದಲ್ಲಿ ಡೆತ್ ನೋಟ್ ಕೂಡ ಪತ್ತೆಯಾಗಿಲ್ಲ. 
 
ಕಳೆದ 10 ವರ್ಷಗಳಿಂದ ನಗರದಲ್ಲಿ ವಾಸಿಸಿರುವ ಭಾರತಿ ಕ್ಯಾಬ್ ಚಾಲಕಿಯಾಗುವ ಮೊದಲು ಸ್ವಯಂ ಸೇವಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಳು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಪಾಕಿಸ್ತಾನ ಇತರರನ್ನು ದ್ವೇಷಿಸುವುದೇ ನಮ್ಮ ಗುರಿ ಎಂದು ಮಕ್ಕಳಿಗೆ ಪಾಠ ಕಲಿಸುತ್ತಿದೆ: ಖಾರ್