Select Your Language

Notifications

webdunia
webdunia
webdunia
webdunia

ಪಾಕಿಸ್ತಾನ ಇತರರನ್ನು ದ್ವೇಷಿಸುವುದೇ ನಮ್ಮ ಗುರಿ ಎಂದು ಮಕ್ಕಳಿಗೆ ಪಾಠ ಕಲಿಸುತ್ತಿದೆ: ಖಾರ್

ಹೀನಾ ರಬ್ಬಾನಿ ಖಾರ್
ನವದೆಹಲಿ , ಸೋಮವಾರ, 27 ಜೂನ್ 2016 (20:32 IST)
ಪಾಕಿಸ್ತಾನದಲ್ಲಿ ಕಳೆದ ಆರು ದಶಕಗಳಿಂದ ಇತರರನ್ನು ದ್ವೇಷಿಸುವುದೇ ನಮ್ಮ ದೇಶದ ಗುರುತು ಎಂದು ಮಕ್ಕಳಿಗೆ ಪಾಠವನ್ನು ಹೇಳಿಕೊಡಲಾಗುತ್ತದೆ ಎಂದು ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವೆ ಹೀನಾ ರಬ್ಬಾನಿ ಖಾರ್ ಹೇಳಿದ್ದಾರೆ.
 ಮಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಪಾಕಿಸ್ತಾನದ ಪೀಪಲ್ಸ್ ಪಾರ್ಟಿ ನೇತೃತ್ವದ ಸರಕಾರ ಭಾರತದೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಲು ವೀಸಾ ನಿಯಮಗಳನ್ನು ಸಡಿಲಿಸಿದ್ದಲ್ಲದೇ ವಹಿವಾಟು ನಿಯಮಗಳಲ್ಲೂ ಸುಧಾರಣೆ ತಂದಿತ್ತು ಎಂದರು.
 
ಜಮ್ಮು ಕಾಶ್ಮಿರ ಕುರಿತಂತೆ ಮಾತನಾಡಿದ ಅವರು, ಪಾಕಿಸ್ತಾನ ಕಾಶ್ಮಿರವನ್ನು ಯುದ್ಧದಲ್ಲಿ ವಶಪಡಿಸಿಕೊಳ್ಳುತ್ತದೆ ಎಂದು ನಾನು ಭಾವಿಸಿಲ್ಲ. ಆದ್ದರಿಂದ ಉಭಯ ದೇಶಗಳ ನಡುವೆ ಮಾತುಕತೆಯೇ ಪರಿಹಾರವಾಗಲು ಸಾಧ್ಯ ಎಂದರು.
 
ಪಾಕಿಸ್ತಾನದಲ್ಲಿ ಕಳೆದ ಆರು ದಶಕಗಳಿಂದ ಇತರರನ್ನು ದ್ವೇಷಿಸುವುದೇ ನಮ್ಮ ದೇಶದ ಗುರುತು ಎಂದು ಮಕ್ಕಳಿಗೆ ಕಲಿಸಲಾಗುತ್ತದೆ. ಇಲ್ಲಿಯವರೆಗೆ ಭಾರತವನ್ನು ದ್ವೇಷಿಸುವಂತೆ ಕಲಿಸಲಾಗುತ್ತಿತ್ತು. ಇದೀಗ ಅಫ್ಗಾನಿಸ್ತಾನ ದೇಶದ ನಾಗರಿಕರನ್ನು ದ್ವೇಷಿಸುವಂತೆ ಕಲಿಸಲಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಪಾಕಿಸ್ತಾನದ ಕಿಮ್ ಕರದರ್ಶನ್‌ಳೊಂದಿಗೆ ಸೆಲ್ಫಿ ತೆಗೆಸಿಕೊಂಡ ಮೌಲ್ವಿ ಅಮಾನತು