Select Your Language

Notifications

webdunia
webdunia
webdunia
webdunia

ಪಾಕಿಸ್ತಾನದ ಕಿಮ್ ಕರದರ್ಶನ್‌ಳೊಂದಿಗೆ ಸೆಲ್ಫಿ ತೆಗೆಸಿಕೊಂಡ ಮೌಲ್ವಿ ಅಮಾನತು

ಪಾಕಿಸ್ತಾನ
ಇಸ್ಲಾಮಾಬಾದ್ , ಸೋಮವಾರ, 27 ಜೂನ್ 2016 (20:21 IST)
ಪಾಕಿಸ್ತಾನದ ಖ್ಯಾತ ಮಸೀದಿಯೊಂದರ ಮುಖ್ಯ ಮೌಲ್ವಿ ವಿವಾದಾತ್ಮಕ ನಟಿಯೊಂದಿಗೆ ಸೆಲ್ಫಿ ತೆಗೆದುಕೊಂಡ ಹಿನ್ನೆಲೆಯಲ್ಲಿ ಆತನ ನಡತೆಯನ್ನು ವಿರೋಧಿಸಿ ಹಿರಿಯ ಸರಕಾರಿ ಸಮಿತಿಯಿಂದ ಅಮಾನತುಗೊಳಿಸಲಾಗಿದೆ ಎಂದು ಧಾರ್ಮಿಕ ವ್ಯವಹಾರಗಳ ಸಚಿವಾಲಯ ತಿಳಿಸಿದೆ. 
 
ಮುಫ್ತಿ ಅಬ್ದುಲ್ ಖಾವಿಯನ್ನು ರಮಜಾನ್ ಹಬ್ಬದ ದಿನವನ್ನು ನಿರ್ಧರಿಸುವ ಚಂದ್ರನನ್ನು ನೋಡುವ ಸಮಿತಿಯಿಂದ (ಮೂನ್ ಸೈಟಿಂಗ್ ಕಮಿಟಿ) ಅಮಾನತುಗೊಳಿಸಲಾಗಿದೆ ಎಂದು ಸಚಿವಾಲಯ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
 
ಸಾಮಾಜಿಕ ಜಾಲ ತಾಣದಲ್ಲಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ ಹಾಟ್ ನಟಿ ಕಂದೀಲ್ ಬಲೋಚ್‌‌ಳೊಂದಿಗೆ ಸೆಲ್ಫಿ ತೆಗೆಸಿಕೊಂಡಿದ್ದಲ್ಲದೇ ಅದನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಪೋಸ್ಟ್ ಮಾಡಿರುವುದು ವಿವಾದಕ್ಕೆ ಕಾರಣವಾಗಿತ್ತು. 
 
ಪಾಕಿಸ್ತಾನದ ಕಿಮ್ ಕರದರ್ಶನ್ ಎಂದೇ ಖ್ಯಾತಿಯಾಗಿರುವ ಬಲೋಚ್ , ತನ್ನ ನಗ್ನ ಮತ್ತು ಅರೆನಗ್ನ ಪೋಜ್‌ಗಳನ್ನು ನೀಡುವುದಕ್ಕೆ ಹೆಸರುವಾಸಿಯಾಗಿದ್ದು, ಇಂತಹ ಮಹಿಳೆಯೊಂದಿಗೆ ಫೋಟೋ ತೆಗೆಸಿಕೊಂಡಿರುವುದು ಇಸ್ಲಾಂ ಧರ್ಮಕ್ಕೆ ಕಪ್ಪು ಚುಕ್ಕೆ ಎಂದು ಇತರ ಮೌಲ್ವಿಗಳು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನಲ್ಲಿ ಕಂಠ ಪೂರ್ತಿ ಕುಡಿದ ನೈಜೀರಿಯನ್ ಮಹಿಳೆಯ ವಿಚಿತ್ರ ವರ್ತನೆ