ಬೆಂಗಳೂರು: ಡ್ರಗ್ಸ್ ಪೆಡ್ಲರ್‌ಗಳ ಜತೆ ಡ್ರಗ್ಸ್ ಪಾರ್ಟಿ ನಡೆಸಿದ್ದ ಆರೋಪದಡಿ ಸ್ನೇಹ ಸಂಪಾದಿಸಿ ಅವರೊಂದಿಗೆ ಪಾರ್ಟಿ ನಡೆಸಿ ಅಮಾನತುಗೊಂಡಿರುವ ೧೧ಮಂದಿ ಪೊಲೀಸರ ವಿರುದ್ಧ ಮಂಗಳಾರತಿ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಲಾಯಿತು.
ಪೊಲೀಸರ ಭಾವಚಿತ್ರಕ್ಕೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ (ಕೆಆರ್‌ಎಸ್) ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಲಾಯಿತು.
ಡ್ರಗ್ಸ್ ಪೆಡ್ಲರ್‌ಗಳ ಜತೆಗೆ ಕೈಜೋಡಿಸಿದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಧಿಕ್ಕಾರ ಕೂಗಿ, ಆಕ್ರೋಶ ಹೊರಹಾಕಲಾಯಿತು.
ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ರಘು ಜಾಣಗೆರೆ ಮಾತನಾಡಿ, ಯುವ ಜನರನ್ನು ರಕ್ಷಿಸಬೇಕಾದ ಪೊಲೀಸರೇ ಡ್ರಗ್ಸ್ ಪೆಡ್ಲೆರ್‌ಗಳ ಜೊತೆ ಕೈಜೋಡಿಸಿ ಅಮಾನತು ಆಗಿರುವ ಪ್ರಕರಣವು ತಲೆತಗ್ಗಿಸುವಂತದು ಎಂದು ಆಕ್ರೋಶ ಹೊರಹಾಕಿದರು.
ರಾಜ್ಯ ಉಪಾಧ್ಯಕ್ಷ ಎಸ್.ಮಂಜುನಾಥ ಮಾತನಾಡಿ, ಕೇವಲ ಚಾಮರಾಜಪೇಟೆ, ಜೆ.ಜೆ.ನಗರ ಠಾಣೆಯ ಪೊಲೀಸರ ಕೃತ್ಯ ಅಲ್ಲ. ನಗರದ ಬಹುತೇಕ ಪೊಲೀಸ್ ಠಾಣೆಯ ಪೊಲೀಸರು ಇಂತಹ ದಂಧೆಯಲ್ಲಿ ಶಾಮೀಲಾಗಿದ್ದಾರೆ ಎಂದು ಆಪಾದಿಸಿದರು.
ರಾಜ್ಯ ಜಂಟಿ ಕಾರ್ಯದರ್ಶಿ ಎಲ್. ಜೀವನ್ ಮಾತನಾಡಿ, ಸರ್ಕಾರ ಡ್ರಗ್ಸ್ ದಂಧೆಕೋರರನ್ನು ಮಟ್ಟ ಹಾಕಬೇಕು ಎಂದು ಆಗ್ರಹಿಸಿದರು.
ಯುವಜನತೆಯನ್ನು ಕಾಪಾಡಬೇಕಿದ್ದ ಪೊಲೀಸರ ಜತೆ ಡ್ರಗ್ಸ್ ಪಾರ್ಟಿ, ಹೀಗಾದ್ರೆ ಸಮಾಜದ ಗತಿಯೇನು