Select Your Language

Notifications

webdunia
webdunia
webdunia
webdunia

Bengaluru Rains: ಬೆಂಗಳೂರಿನಲ್ಲಿ ಭಾರೀ ಮಳೆ, ಮುಂದಿನ ಎರಡು ದಿನಗಳಿಗೆ ಎಚ್ಚರಿಕೆ ಗಮನಿಸಿ

Karnataka Rains
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು ಅಪರಾಹ್ನ ಭಾರೀ ಮಳೆಯಾಗುತ್ತಿದೆ. ಮುಂದಿನ ಎರಡು ದಿನಗಳಿಗೆ ಎಚ್ಚರಿಕೆ ಗಮನಿಸಿ.
 

ರಾಜ್ಯದಲ್ಲಿ ಈಗ ಮುಂಗಾರು ಪೂರ್ವ ಮಳೆ ಅಬ್ಬರಿಸುತ್ತಿದೆ. ಇಂದು ನಿನ್ನೆಯೂ ಬೆಂಗಳೂರಿನಲ್ಲಿ ಮಳೆಯಾಗಿತ್ತು. ಇಂದು ಅಪರಾಹ್ನ ಮತ್ತೆ ವರುಣನ ಆಗಮನವಾಗಿದೆ. ಹೆಬ್ಬಾಳ, ಕೆಆರ್ ಪುರಂ, ಯಶವಂತಪುರ, ಜೆಪಿ ನಗರ, ಶಾಂತಿನಗರ, ಕೆಆರ್ ಮಾರ್ಕೆಟ್, ವಿಧಾನಸೌಧ ಸುತ್ತಮುತ್ತ ಭಾರೀ ಮಳೆಯಾಗುತ್ತಿದೆ.

ಇಂದು ಬೆಳಿಗ್ಗೆಯಿಂದಲೂ ನಗರದಲ್ಲಿ ದಟ್ಟ ಮೋಡ ಕವಿದ ವಾತಾವರಣವಿತ್ತು. ಇದೀಗ ಧಾರಾಕಾರ ಮಳೆಯಾಗುತ್ತಿದೆ. ಸಂಜೆ ಮಳೆ ಸುರಿಯುತ್ತಿರುವುದರಿಂದ ಕಚೇರಿಗಳಿಂದ ಮನೆಗೆ ತೆರಳುವವರು ಸಂಕಷ್ಟಕ್ಕೀಡಾಗಿದ್ದಾರೆ.

ರಸ್ತೆಗಳಲ್ಲಿ ನೀರು ತುಂಬಿಕೊಳ್ಳುತ್ತಿದ್ದು ವಾಹನ ಸವಾರರು ಪರದಾಡುವಂತಾಗಿದೆ. ದಟ್ಟ ಮೋಡವಿದ್ದು ರಾತ್ರಿ ಇನ್ನಷ್ಟು ಮಳೆಯಾಗುವ ಸೂಚನೆಯಿದೆ. ಹವಾಮಾನ ವರದಿಗಳ ಪ್ರಕಾರ ಮುಂದಿನ ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ಭಾರೀ ಮಳೆಯ ಸೂಚನೆಯಿದೆ. ಹೀಗಾಗಿ ಜನರು ಎಚ್ಚರಿಕೆಯಿಂದರಬೇಕಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ನಾಯಕರು ಸೈಕಲ್ ತುಳಿಯಲು ಕಾರಣಯಾರು: ಪ್ರಿಯಾಂಕ್ ಖರ್ಗೆ