Publish Date: Thu, 16 May 2024 (12:23 IST)
Updated Date: Thu, 16 May 2024 (12:25 IST)
ಬೆಂಗಳೂರು: ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಮಳೆ, ಮೋಡ ಕವಿದ ವಾತಾವರಣವಿದೆ. ಇಂದು ಬೆಂಗಳೂರಿನಲ್ಲಿ ಮಳೆಯಾಗುತ್ತದಾ, ಇಂದಿನ ಹವಾಮಾನ ವರದಿ ಹೇಗಿದೆ ಇಲ್ಲಿದೆ ಮಾಹಿತಿ.
ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳಿಂದ ಮಳೆ ಕೊಂಚ ಕಡಿಮೆಯಾಗಿದೆ. ಆದರೆ ಮೋಡ ಕವಿದ ವಾತಾವರಣ ಮಾತ್ರ ಹಾಗೆಯೇ ಮುಂದುವರಿದಿದೆ. ಸೋಮವಾರ ರಾತ್ರಿ ಸುರಿದಿದ್ದ ಧಾರಾಕರ ಮಳೆ ಬಳಿಕ ವರುಣ ಕೊಂಚ ಬ್ರೇಕ್ ಪಡೆದಿದ್ದಾನೆ. ನಿನ್ನೆ ಮತ್ತು ಇಂದು ಮೋಡ ಕಡಿದ ವಾತಾವರಣವಿದೆ.
ಇಂದು ಬೆಂಗಳೂರಿನ ತಾಪಮಾನ 28 ಡಿಗ್ರಿ ಸೆಲ್ಶಿಯಸ್ ಇದೆ. ಹಗಲು ಮೋಡ ಕವಿದ ವಾತಾವರಣವಿದ್ದರೂ ಮಳೆಯ ಸಂಭವ ಕಡಿಮೆ ಎನ್ನಬಹುದು. ರಾತ್ರಿ ಕೆಲವೆಡೆ ಸಣ್ಣ ಮಳೆಯಾಗುವ ಸಾಧ‍್ಯತೆಯಿದೆ. ಅದರ ಹೊರತಾಗಿ ಸೆಖೆಯ ವಾತಾವರಣ ಮುಂದುವರಿಯಲಿದೆ.
ಆದರೆ ವೀಕೆಂಡ್ ನಲ್ಲಿ ಈ ವಾರ ಮಳೆಯ ಸೂಚನೆಯಿದೆ. ಶುಕ್ರವಾರದಿಂದ ನಾಲ್ಕು ದಿನಗಳವರೆಗೆ ನಿರಂತರ ಮಳೆಯಾಗುವ ಸೂಚನೆಯಿದೆ. ಅದರಲ್ಲೂ ಭಾನುವಾರ ಮತ್ತು ಸೋಮವಾರ ಎರಡು ದಿನ ಭಾರೀ ಮಳೆಯಾಗುವ ಸೂಚನೆ ಕಂಡುಬರುತ್ತಿದೆ. ಆದರೆ ಕರ್ನಾಟಕದಲ್ಲಿ ಅಲ್ಲಲ್ಲಿ ಮಳೆಯಾಗುತ್ತಿದ್ದು ಇಂದೂ ಮಳೆಯಾಗುವ ಸಾಧ‍್ಯತೆಯಿದೆ. ಇಂದು ರಾಜ್ಯದಲ್ಲಿ ಗರಿಷ್ಠ 32 ಡಿಗ್ರಿವರೆಗೆ ತಲುಪಲಿದೆ.