Publish Date: Mon, 30 Apr 2018 (13:31 IST)
Updated Date: Mon, 30 Apr 2018 (13:34 IST)
ಮಾಜಿ ಸಿಎಂ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ವಿರುದ್ದ ಮಾಜಿ ಸಚಿವ ರೇವೂ ನಾಯಕ ಬೆಳಮಗಿ ತೊಡೆತಟ್ಟಿದ್ದಾರೆ.
ನನ್ನ ಠೇವಣಿ ಕಳೆಯಲು ಯಡಿಯೂರಪ್ಪನವರಿಂದ ಸಾಧ್ಯವಿಲ್ಲ. ಯಾಕೆಂದ್ರೆ ನನ್ನೊಂದಿಗೆ ಮತದಾರರಿದ್ದಾರೆ ಎಂದು ಬಿಎಸ್ ವೈ ಸವಾಲು ಹಾಕಿದ್ರು.
ಕಲಬುರಗಿಯಲ್ಲಿ ಮಾತನಾಡಿದ ಬೆಳಮಗಿ, ಈ ಹಿಂದೆ ಬಿಎಸ್ ವೈ ಅವರು ಕೆಜಿಪಿ ಪಕ್ಷ ಸ್ಥಾಪಿಸಿದ್ದ ವೇಳೆ ನಾನು ಅವರೊಂದಿಗೆ ಹೋಗಿಲ್ಲ ಎನ್ನುವ ಕಾರಣಕ್ಕೆ ನನ್ನ ವಿರುದ್ದ ಷಡ್ಯಂತ್ರ ರೂಪಿಸಿ ಟಿಕೆಟ್ ತಪ್ಪಿಸಿದ್ದಾರೆ. ಈಗ ಬೆಳಮಗಿ ಠೇವಣಿ ಕಳೆದ್ರೆ ನನಗೆ ಸಮಧಾನ ಎಂದು ಹೇಳುತ್ತಿದ್ದಾರೆ. ನನ್ನ ಠೇವಣಿ ಕಳೆಯಲು ಇವರ್ಯಾರು....?, ನನ್ನ ಠೇವಣಿ ಯಾಕೆ...? ಗೆಲ್ಲಿಸಿ ವಿಧಾನಸಭೆಗೆ ಕಳುಹಿಸಲು ಮತದಾರರ ಪ್ರಭು ನನ್ನೊಂದಿಗೆ ಇದ್ದಾರೆ ಎಂದು ಹೇಳಿದ್ರು.
ಯಡಿಯೂರಪ್ಪನವರ ವಿರುದ್ದ ಅಸಮಾಧಾನಗೊಂಡಿರುವ ಹಲವು ಜನ ನಾಯಕರು ಬಿಎಸ್ ವೈ ಅವರನ್ನು ಬೈದಿದ್ದಾರೆ. ಆದ್ರೆ ನಾನು ತುಟಿಪಿಟಕೆಂದಿಲ್ಲ. ಆದ್ರೂ ನನ್ನ ವಿರುದ್ದ ಷಡ್ಯಂತ್ರ ಮಾಡಿದ್ದಾರೆ. ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಜನರೇ ಅದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದ ಬೆಳಮಗಿ. ನನ್ನ ಠೇವಣಿ ಜಪ್ತಿ ಆಗೋದಿಲ್ಲ, ಬದಲಾಗಿ ಬಿಜೆಪಿ ಅಭ್ಯರ್ಥಿ ಠೇವಣಿ ಕಳೆದುಕೊಳ್ಳುತ್ತಾರೆ ಎಂದು ಬೆಳಮಗಿ ಯಡಿಯೂರಪ್ಪಗೆ ಸವಾಲು ಹಾಕಿದ್ರು. ಇನ್ನು ಗುಂಡಾಗರ್ದಿ ಮಾಡಿದ್ದು ನಾನಲ್ಲ. ಈಗ ಟಿಕೆಟ್ ಕೊಟ್ಟಿದ್ದಿರಲ್ಲ, ಅವರು ಗುಂಡಾಗರ್ದಿ ಮಾಡಿದ್ದಾರೆ ಎಂದಿದ್ದಾರೆ.