Daily Horoscope

Select Your Language

Notifications

webdunia
webdunia
webdunia
webdunia

ಜನಾರ್ಧನ ರೆಡ್ಡಿ ಮಾಡೆಲ್ ಹೌಸ್ ಗೆ ಬೆಂಕಿ: ಅರೆಸ್ಟ್ ಆದವರು ಯಾರು ಗೊತ್ತಾ

Janardhana Reddy house set fire
Photo Credit: X
ಬಳ್ಳಾರಿ: ಶಾಸಕ ಜನಾರ್ಧನ ರೆಡ್ಡಿ ಮಾಡೆಲ್ ಹೌಸ್ ಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಈಗ ಟ್ವಿಸ್ಟ್ ಸಿಕ್ಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅರೆಸ್ಟ್ ಆದವರು ಯಾರು ಗೊತ್ತಾ?

ಜನಾರ್ದನ ರೆಡ್ಡಿ ಮನೆ ಮುಂದೆ ಬ್ಯಾನರ್ ಗಲಾಟೆ ತಣ್ಣಗಾಗುವ ಮೊದಲೇ ಈಗ ಅವರ ಮಾಡೆಲ್ ಹೌಸ್ ಗೆ ಯಾರೋ ಬೆಂಕಿ ಹಚ್ಚಿದ್ದಾರೆ. ಇದರ ಹಿಂದೆಯೂ ರಾಜಕೀಯ ವೈಷಮ್ಯ ಕಾರಣವಿರಬಹುದೇ ಎಂದು ಚರ್ಚಿಸಲಾಗಿತ್ತು.

ಆದರೆ ಈಗ ಬಳ್ಳಾರಿ ಎಸ್ ಪಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು ಒಟ್ಟು 8 ಮಂದಿ ಅರೆಸ್ಟ್ ಮಾಡಲಾಗಿದೆ. ಈ ಪೈಕಿ 6 ಮಂದಿ ಅಪ್ರಾಪ್ತರು ಎಂದಿದ್ದಾರೆ. ಕೆಲವರು ಇಲ್ಲಿ ಸುತ್ತಮುತ್ತಲಿನವರು. ಮತ್ತೆ ಕೆಲವರು ಮುಂಬೈನಿಂದ ಬಂದವರೂ ಇದ್ದಾರೆ. ರೀಲ್ಸ್ ತೆಗೆಯಬೇಕು ಎಂದು ಇಲ್ಲಿಗೆ ಬಂದಿದ್ದರು. ಕೆಲವರು ಸ್ಟೂಡೆಂಟ್ಸ್ ಇದ್ದಾರೆ,  ಕೆಲವರು ಸ್ಕೂಲ್ ಡ್ರಾಪ್ ಔಟ್ ಇದ್ದಾರೆ. ಮತ್ತೆ ಕೆಲವರು ಇಲ್ಲೇ ಸಣ್ಣ ಪುಟ್ಟ ಕೆಲಸ ಮಾಡಿಕೊಂಡವರು ಇದ್ದಾರೆ. ಇದರ ಹಿಂದೆ ರಾಜಕೀಯ ಷಡ್ಯಂತ್ರವಿರುವುದು ಇದುವರೆಗೆ ಮಾಹಿತಿಯಿಲ್ಲ. ಅವರ ಪೋಷಕರ ಹಿನ್ನಲೆಯನ್ನೂ ತಿಳಿದುಕೊಂಡಿದ್ದೇವೆ’ ಎಂದು ಬಳ್ಳಾರಿ ಎಸ್ ಪಿ ಸುಮನ್ ಪನ್ನೇಕರ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಬಿ ರಾಮ್ ಜಿ ಯೋಜನೆಗೆ ಆಂಧ್ರಪ್ರದೇಶಕ್ಕೂ ಆತಂಕ: ಸಿದ್ದರಾಮಯ್ಯ ಬಾಂಬ್ ಗೆ ಅಲ್ಲಾಡುತ್ತಾ ಎನ್ ಡಿಎ