Publish Date: Sat, 26 Oct 2019 (19:30 IST)
Updated Date: Sat, 26 Oct 2019 (19:32 IST)
ಖಾಸಗಿ ಕಂಪನಿಯ ಏರ್ ಲೈನ್ಸ್ ದಲ್ಲಿ ಕೆಲಸ ಕೊಡಿಸುವುದಾಗಿ ವ್ಯಕ್ತಿಯೊಬ್ಬ ಹಣ ಪಡೆದು ಮೋಸ ಮಾಡಿದ್ದಾನೆ.
ಹುಬ್ಬಳ್ಳಿ ನಗರದ ಓರ್ವರಿಗೆ ಖಾಸಗಿ ಕಂಪನಿಯ ಏರ್ ಲೈನ್ಸ್ ದಲ್ಲಿ ಕೆಲಸ ಕೊಡಿಸುವುದಾಗಿ ವ್ಯಕ್ತಿಯೊಬ್ಬ ಆನ್ ಲೈನ್ ಮೂಲಕ 48 ಸಾವಿರ ರೂ. ಜಮಾ ಮಾಡಿಸಿಕೊಂಡು ವಂಚಿಸಿರುವುದು ಬೆಳಕಿಗೆ ಬಂದಿದೆ.
ನಗರದ ಆದರ್ಶ ಸಿ.ಡೊಣಗವರ ಎಂಬುವವರಿಗೆ ಸರಜಪಾಲ ಎಂಬಾತನು ಜು.13 ರಿಂದ 23 ರವರೆಗೆ ಕರೆ ಮಾಡಿ, ಇಂಡಿಗೋ ಏರ್ ಲೈನ್ಸ್ ನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿದ್ದಾನೆ.
ನಂತರ ವಿವಿಧ ರೀತಿಯ ಚಾರ್ಜ್ ರೂಪದಲ್ಲಿ ಹಂತ ಹಂತವಾಗಿ ಒಟ್ಟು 48.010 ರೂ ವನ್ನು ಆನ್ ಲೈನ್ ಮೂಲಕ ಜಮಾ ಮಾಡಿಸಿಕೊಂಡು, ಕೆಲಸ ನೀಡದೇ ವಂಚಿಸಿದ್ದಾನೆ. ಈ ಕುರಿತು ಹುಬ್ಬಳ್ಳಿ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.