Select Your Language

Notifications

webdunia
webdunia
webdunia
webdunia

ಬೆಳಗಾವಿ ಎಸ್‌ಡಿಎ ಸಾವು ಆತ್ಮಹತ್ಯೆಯಲ್ಲ ಕೊಲೆ: ಎಸಿಪಿಗೆ ಬಂದ ಅನಾಮಧೇಯ ಪತ್ರದಲ್ಲಿ ಹೀಗಿದೆ

Tehsildar Office SDA Rudranna Yadavan Suicide Case, Minister Lakshmi Hebbalkar, Letter To Belgavi ACP,

Sampriya

ಬೆಳಗಾವಿ , ಸೋಮವಾರ, 18 ನವೆಂಬರ್ 2024 (18:28 IST)
Photo Courtesy X
ಬೆಳಗಾವಿ: ಇಲ್ಲಿನ ತಹಶೀಲ್ದಾರ್ ಕಚೇರಿ ಎಸ್‌ಡಿಎ ರುದ್ರಣ್ಣ ಯಡವಣ್ಣವರ ಅವರದ್ದು ಆತ್ಮಹತ್ಯೆಯಲ್ಲ, ಕೊಲೆ ಎಂದು ಬರೆದು ಎಸಿಪಿ ಖಡೇಬಜಾರ್‌ ಅವರಿಗೆ ಅನಾಮಧೇಯ ಪತ್ರವೊಂದು ಬಂದಿದೆ.

ಪ್ರಕರಣದ ಆರೋಪಿಗಳಾದ ತಹಶೀಲ್ದಾರ್‌ ಬಸವರಾಜ ನಾಗರಾಳ, ಎಫ್‌ಡಿಎ ಅಶೋಕ ಕಬ್ಬಲಿಗೇರ ಮತ್ತು ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರ ಆಪ್ತ ಸಹಾಯಕ ಸೋಮು ದೊಡವಾಡಿ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರಾದ ಬೆನ್ನಲ್ಲೇ, ಈ ಪತ್ರ ಬಂದಿದೆ.

ಬಿಳಿ ಹಾಳೆಯ ಮೇಲೆ ಟೈಪಿಸಿ ಪ್ರಿಂಟ್ ತೆಗೆದು, ಲಕೋಟೆಯಲ್ಲಿ ಹಾಕಿ ಖಡೇಬಜಾರ್ ಠಾಣೆಗೆ ಪೋಸ್ಟ್ ಮಾಡಲಾಗಿದೆ.

ಇನ್ನೂ ಇದರ ಪ್ರತಿಗಳನ್ನು ರಾಜ್ಯಪಾಲರು, ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು, ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿ, ನಗರ ಪೊಲೀಸ್ ಆಯುಕ್ತರು ಸೇರಿ ಹಲವರಿಗೆ ಪೋಸ್ಟ್ ಮಾಡಲಾಗಿದೆ ಎಂದೂ ಪತ್ರದಲ್ಲಿ ಪಟ್ಟಿ‌‌ ನೀಡಲಾಗಿದೆ.

‘ರುದ್ರಣ್ಣನದು ಆತ್ಮಹತ್ಯೆ ಎಂದು ಬಿಂಬಿಸಲಾಗುತ್ತಿದೆ. ಆದರೆ ಇದು ಕೊಲೆ.  ತಹಶೀಲ್ದಾರ್‌ ಜೀಪ್‌ನ ಚಾಲಕ ಯಲ್ಲಪ್ಪ ಬಡಸದ ಎಂಬಾತನೇ ಕೊಲೆಯ ಸೂತ್ರಧಾರ. ಆ ವಾಹನ ತಪಾಸಿಸಿದರೆ ಮತ್ತು ಯಲ್ಲಪ್ಪನ ವಿಚಾರಣೆ ಮಾಡಿದರೆ, ಕೊಲೆ ರಹಸ್ಯ ಹೊರಬರುತ್ತದೆ. ಯಲ್ಲಪ್ಪನ ಪತ್ನಿ ಅನೈತಿಕ ಸಂಬಂಧ ಇಟ್ಟುಕೊಂಡು, ಅವರ ಎಲ್ಲ ದುಡ್ಡು ಹೊಡೆದಿದ್ದಾಳೆ. ಮೃತಪಟ್ಟವರಿಗೆ ನ್ಯಾಯ ಸಿಗಬೇಕು. ಪ್ರಕರಣ ಮುಚ್ಚಿ ಹಾಕಬಾರದು’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರೈಲಿನಲ್ಲಿ 63 ಲಕ್ಷದ ಚಿನ್ನಾಭರಣ ತಂದ ಕುಟುಂಬಕ್ಕೆ ಮನೆಗೆ ಬಂದ್ಮೇಲೆ ಶಾಕ್‌