Select Your Language

Notifications

webdunia
webdunia
webdunia
webdunia

ನಾಯಿ ಜೊತೆ ಪತ್ನಿಗೆ ಸಂಭೋಗ ಮಾಡಿಸಿದ್ದ ಪತಿ ಅರೆಸ್ಟ್

ನಾಯಿ ಜೊತೆ ಪತ್ನಿಗೆ ಸಂಭೋಗ ಮಾಡಿಸಿದ್ದ ಪತಿ ಅರೆಸ್ಟ್
ಬೆಳಗಾವಿ , ಸೋಮವಾರ, 27 ಮಾರ್ಚ್ 2017 (09:05 IST)
ಜಗತ್ತಿನಲ್ಲಿ ಎಂಥೆಂಥಾ ವಿಕೃತ ಮನಸ್ಸಿನವರಿರುತ್ತಾರೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹುಲಗುಂದ ಗ್ರಾಮದ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನ ನಾಯಿ ಜೊತೆ ಸಂಭೋಗ ಮಾಡಿಸಿ ಅದನ್ನ ನೋಡಿ ವಿಕೃತ ಸಂತೋಷ ಅನುಭವಿಸುತ್ತಿದ್ದ ಆರೋಪ ಕೇಳಿಬಂದಿದೆ. ಪತಿಯ ಈ ಕಾಟ ಸಹಿಸಲಾರದ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಟಕೋಳ ಪೊಲಿಸರಿಗೆ ನೊಂದ ಮಹಿಳೆ ದೂರು ನೀಡಿದ್ದು, ಆರೋಪಿ ಸಂಜೀವ ಭಾಗೋಜಿಯನ್ನ ಬಂಧಿಸಲಾಗಿದೆ. ಅಸ್ವಸ್ಥ ಮಹಿಳೆಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

2 ವರ್ಷದ ಹಿಂದಷ್ಟೇ ವಿವಾಹವಾಗಿದ್ದ ಸಂಜೀವ್ ಬಲವಂತವಾಗಿ ನಾಯಿ ಜೊತೆ ಸಂಭೋಗ ಮಾಡಿಸಿದ್ದ. ಪದೇ ಪದೇ ನಾಯಿ ಜೊತೆ ಲೈಂಗಿಕ ಕ್ರಿಯೆ ನಡೆಸುವಂತೆ ಪೀಡಿಸುತ್ತಿದ್ದ ಎಂದು ತಿಳಿದುಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಸೀಸ್ ನಲ್ಲಿ ಕೇರಳ ವ್ಯಕ್ತಿಯ ಮೇಲೆ ಜನಾಂಗೀಯ ದಾಳಿ