Select Your Language

Notifications

webdunia
webdunia
webdunia
webdunia

ದೇಶದಿಂದ ಹೊರಗೆ ಹಾಕಿದ್ದಕ್ಕೆ ಇಂದಿರಾ ಗಾಂಧಿಯನ್ನು ಜೈಲಿಗೆ ಕಳುಹಿಸಿದ್ದೆ. ರಾಮ್ ಜೇಠ್ಮಲಾನಿ

ದೇಶದಿಂದ ಹೊರಗೆ ಹಾಕಿದ್ದಕ್ಕೆ ಇಂದಿರಾ ಗಾಂಧಿಯನ್ನು ಜೈಲಿಗೆ ಕಳುಹಿಸಿದ್ದೆ. ರಾಮ್ ಜೇಠ್ಮಲಾನಿ
ಬೆಂಗಳೂರು , ಸೋಮವಾರ, 29 ಆಗಸ್ಟ್ 2016 (20:19 IST)
ನನ್ನನ್ನು ದೇಶದಿಂದ ಹೊರಗೆ ಹಾಕಿದ್ದಕ್ಕೆ ಇಂದಿರಾ ಗಾಂಧಿಯನ್ನು ಜೈಲಿಗೆ ಕಳುಹಿಸಿ ಸೇಡು ತೀರಿಸಿಕೊಂಡಿದ್ದೆ ಎಂದು ಖ್ಯಾತ ಹಿರಿಯ ವಕೀಲ ರಾಮ್ ಜೇಠ್ಮಲಾನಿ ಹೇಳಿದ್ದಾರೆ.
 
ಮಾಜಿ ಸಿಎಂ ರಾಮಕೃಷ್ಣ ಹೆಗಡೆಯವರ 90ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ  ಜೇಠ್ಮಲಾನಿ, ಮಾಜಿ ಪ್ರಧಾನಿ ಇಂದಿರಾಗಾಂಧಿ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ದೇಶದಿಂದ ಹೊರಗಟ್ಟಿದ್ದಕ್ಕೆ ಅವರನ್ನು 23 ದಿನಗಳ ಕಾಲ ಜೈಲಿನಲ್ಲಿರುವಂತೆ ಮಾಡಿ ಸೇಡು ತೀರಿಸಿಕೊಂಡೆ ಎಂದರು
 
ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಸರಳ, ಸಜ್ಜನಿಕೆಯ ವ್ಯಕ್ತಿಯಾಗಿದ್ದು, ಸದಾ ಜನತೆಯ ಏಳಿಗೆಯನ್ನು ಬಯಸುತ್ತಿದ್ದರು. ಆದರೆ, ರಾಜಕೀಯ ಜೀವನದಲ್ಲಿ ಅವರ ಮಿತ್ರರು ಶತ್ರುಗಳಾದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.
 
ಕರ್ನಾಟಕ ರಾಜ್ಯದಲ್ಲಿ ಅತ್ಯಂತ ಜನಪ್ರಿಯ ಮುಖ್ಯಮಂತ್ರಿ ಎನಿಸಿಕೊಂಡಿದ್ದ ಹೆಗಡೆಯವರು  ದೂರವಾಣಿ ಕದ್ದಾಲಿಕೆ ಆರೋಪ ಬಂದಾಗ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೊಮ್ಮೆ ಚುನಾವಣೆ ಎದುರಿಸಿದರು. ಅವರೊಬ್ಬ ಅಪರೂಪದ ಧೀಮಂತ ರಾಜಕಾರಣಿ ಎಂದು ಹಿರಿಯ ವಕೀಲ ರಾಮ್ ಜೇಠ್ಮಲಾನಿ ಬಣ್ಣಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಬೆಲೂಚಿಸ್ತಾನ ಕುರಿತು ಮೋದಿ ಪ್ರತಿಕ್ರಿಯೆಯಿಂದ ಚೀನಾಗೇಕೆ ಚಿಂತೆ?