Select Your Language

Notifications

webdunia
webdunia
webdunia
webdunia

ಬೆಲೂಚಿಸ್ತಾನ ಕುರಿತು ಮೋದಿ ಪ್ರತಿಕ್ರಿಯೆಯಿಂದ ಚೀನಾಗೇಕೆ ಚಿಂತೆ?

ಬೆಲೂಚಿಸ್ತಾನ ಕುರಿತು ಮೋದಿ ಪ್ರತಿಕ್ರಿಯೆಯಿಂದ ಚೀನಾಗೇಕೆ ಚಿಂತೆ?
ನವದೆಹಲಿ , ಸೋಮವಾರ, 29 ಆಗಸ್ಟ್ 2016 (19:56 IST)
ಪ್ರಕ್ಷುಬ್ಧ ಪೀಡಿತ ಬಲೂಚಿಸ್ತಾನವನ್ನು ಕುರಿತು ಪ್ರಧಾನಿ ನರೇಂದ್ರ ಮೋದಿ ಉಲ್ಲೇಖಿಸಿದ್ದು ಅನೇಕ ಮಂದಿ ಬೀಜಿಂಗ್ ವ್ಯೂಹಾತ್ಮಕ ತಜ್ಞರಿಗೆ ಕಳವಳ ಉಂಟುಮಾಡಿದೆ. ಈ ಪ್ರದೇಶವನ್ನು ಅಸ್ಥಿರಗೊಳಿಸುವ ಪ್ರಯತ್ನ ಎಂದು ಕೆಲವರು ಅಭಿಪ್ರಾಯಪಟ್ಟರು.
 
ಚೀನಾ ಪಾಕಿಸ್ತಾನ ಆರ್ಥಿಕ ಕಾರಿಡಾರ್ ಯೋಜನೆ ಪಶ್ಚಿಮ ಕ್ಸಿಂಜಿಯಾಂಗ್ ಪ್ರಾಂತ್ಯದಿಂದ ಬಲೂಚಿಸ್ತಾನದ ಗ್ವಾಡಾರ್ ಬಂದರಿನವರೆಗೆ ವ್ಯಾಪಿಸಿದ್ದು, ಭಾರತ ಈ ಯೋಜನೆಗೆ ಆಕ್ಷೇಪಿಸಿದೆ.

ಏಕೆಂದರೆ ಈ ಯೋಜನೆ ಗಿಲ್ಗಿಟ್- ಬಾಲ್ಟಿಸ್ತಾನ್ ಪ್ರದೇಶದ ಮೂಲಕ ಹಾದುಹೋಗಿದ್ದು, ಇದನ್ನು ಜಮ್ಮು ಕಾಶ್ಮೀರದ ಅವಿಭಾಜ್ಯ ಅಂಗವೆಂದು ಭಾರತ ಪ್ರತಿಪಾದಿಸಿದೆ. 
 
ಅಶಾಂತಿ ಪೀಡಿತ ಬಲೂಚಿಸ್ತಾನದಲ್ಲಿ ದಂಗೆಯನ್ನು ಪಾಕಿಸ್ತಾನ ನಿರ್ದಯವಾಗಿ ಅಡಗಿಸುತ್ತಿದ್ದು, ಭಾರತ ಈ ಕಾರಿಡಾರ್ ನಿರ್ಮಾಣವನ್ನು ಅಸ್ಥಿರಗೊಳಿಸಲು ಪ್ರಯತ್ನಿಸಿದೆ ಎಂದು ಪ್ರಧಾನಿ ಮೋದಿ ಪ್ರತಿಕ್ರಿಯೆ ಕಡೆ ಚೀನಾದ ಭದ್ರತಾ ತಜ್ಞರು ಬೆಟ್ಟು ತೋರಿಸುತ್ತಾ ಹೇಳಿದ್ದಾರೆ. ಇದರಿಂದ ಭಾರತ ಚೀನಾ ಸಂಬಂಧ ಹಾನಿಗೊಳಿಸುತ್ತದೆಂದೂ ಚೀನಾದಿಂದ ಪ್ರತ್ಯುತ್ತರ ಕೂಡ ಬರಬಹುದೆಂದು ಅವರು ಎಚ್ಚರಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗೋರಕ್ಷಕರಿಗೆ ನಮ್ಮ ಬೆಂಬಲವಿದೆ, ಗೋರಕ್ಷಣೆಯನ್ನು ಬೆಂಬಲಿಸ್ತೇವೆ: ಶ್ರೀರಾಘವೇಶ್ವರ ಭಾರತೀ ಸ್ವಾಮಿ