Select Your Language

Notifications

webdunia
webdunia
webdunia
webdunia

ಕರಡಿ ದಾಳಿ: ಗಂಭೀರ ಗಾಯ

ಕರಡಿ ದಾಳಿ: ಗಂಭೀರ ಗಾಯ
ಕೊಪ್ಪಳ , ಸೋಮವಾರ, 17 ಸೆಪ್ಟಂಬರ್ 2018 (18:05 IST)
ಕರಡಿ ಏಕಾಏಕಿ ದಾಳಿ ನಡೆಸಿದ ಪರಿಣಾಮ ವ್ಯಕ್ತಿಯೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ.

ಕೊಪ್ಪಳ ಜಿಲ್ಲಾ ಆಚಾರ ತಿಮ್ಮಾಪುರ ಗ್ರಾಮದಲ್ಲಿ ಕರಡಿ ದಾಳಿ ನಡೆದಿದೆ. ಗ್ರಾಮದ ನಿವಾಸಿ ಹನುಮಪ್ಪ ತಂದೆ ಪಕೀರಪ್ಪ (23) ವಷ೯ದ ಯುವಕನ ಮೇಲೆ ಕರಡಿ ದಾಳಿ ಮಾಡಿದೆ. ದಾಳಿ ಸಂದರ್ಭದಲ್ಲಿ ಗಂಭೀರ ಗಾಯ ಮಾಡಿದೆ. ಬೆಳಗ್ಗೆ ಬಹಿರ್ದೆಸೆಗೆಂದು ಹೊರ ಹೋಗಿದ್ದ ಸಮಯದಲ್ಲಿ ಕರಡಿ ದಾಳಿ ಮಾಡಿದೆ.


ಸಧ್ಯ ಗಂಭೀರವಾಗಿ ಗಾಯಗೊಂಡಿರುವ ಯುವಕ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡವಯುತ್ತಿದ್ದು ಸಾವು ಬದುಕಿನ ಮದ್ಯ ಹೋರಾಟ ನಡೆಸುತ್ತಿದ್ದಾನೆ. ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಗೆ  ದಾಖಲು ಮಾಡಲಾಗುತ್ತಿದೆ. ಈ ಕುರಿತು ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಪೆಟ್ರೋಲ್, ಡೀಸೆಲ್ ಬೆಲೆ 2 ರೂ. ಇಳಿಕೆ