Publish Date: Wed, 27 Dec 2023 (15:21 IST)
Updated Date: Wed, 27 Dec 2023 (16:22 IST)
ರಾಜ್ಯದಲ್ಲಿ ನದಿ ನೀರು ಉಚಿತ, ವಿದ್ಯುತ್ ಕೂಡ ಉಚಿತ ಕೊಡಲಾಗಿದ್ದು, ಬೀಜ ಗೊಬ್ಬರವನ್ನೂ ಕೊಡಲಾಗಿದೆ. ಆದರೆ, ರೈತರು ಬರಗಾಲ ಬೀಳುವುದನ್ನೇ ಕಾಯುತ್ತಿದ್ದಾರೆ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಹೇಳಿದ ಬೆನ್ನಲ್ಲಿಯೇ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರ ಬಗ್ಗೆ ಗೌರವದಿಂದ ಮಾತನಾಡಬೇಕು ಎಂದು ಖಡಕ್ ಎಚ್ಚರಿಕೆಯನ್ನ ರವಾನಿಸಿದ್ದಾರೆ.