Select Your Language

Notifications

webdunia
webdunia
webdunia
webdunia

ಇನ್ಶೂರೆನ್ಸ್ ಮಾಡಿಸುವ ಮುನ್ನ ಎಚ್ಚರ!

ಇನ್ಶೂರೆನ್ಸ್ ಮಾಡಿಸುವ ಮುನ್ನ ಎಚ್ಚರ!
ಮುಂಬೈ , ಸೋಮವಾರ, 3 ಜುಲೈ 2023 (10:14 IST)
ವಾಹನಗಳ ನಕಲಿ ವಿಮಾ ಪಾಲಿಸಿಗಳನ್ನು ಆಟೋಮೊಬೈಲ್ ಬಿಡಿಭಾಗಗಳ ಅಂಗಡಿ ಮಾಲೀಕರಿಗೆ ನೀಡಿದ ಆರೋಪದ ಮೇಲೆ ಮುಂಬೈ ಪೊಲೀಸರು ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
 
ಜೂನ್ 2018 ರಲ್ಲಿ, ಕಲಾಂಬೋಲಿ ಪ್ರದೇಶದಲ್ಲಿ ಅಂಗಡಿಯನ್ನು ನಡೆಸುತ್ತಿದ್ದ ವ್ಯಕ್ತಿಯು, ತನ್ನ ಏಳು ವಾಹನಗಳಿಗೆ  ಇನ್ಶೂರೆನ್ಸ್ ಪಡೆಯಲು ಆರೋಪಿಗೆ 46,370 ರೂ. ಪಾವತಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಾಹನವೊಂದು ಅಪಘಾತಕ್ಕೀಡಾದಾಗ ಸಂದರ್ಭದಲ್ಲಿ ವಿಮೆಗಾಗಿ ಅರ್ಜಿ ಸಲ್ಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಪರಿಶೀಲನೆಯ ವೇಳೆ ಆರೋಪಿ ನೀಡಿದ ಪಾಲಿಸಿ ನಕಲಿ ಎಂಬುದು ತಿಳಿದುಬಂದಿದೆ ಎಂದು ಎಪಿಎಂಸಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅರುಣ್ ಬಿಲಾರೆ ತಿಳಿಸಿದ್ದಾರೆ.

ಬಳಿಕ ಎಲ್ಲಾ ವಾಹನಗಳಿಗೆ ನೀಡಲಾಗಿರುವ ಇನ್ಶೂರೆನ್ಸ್ ಪೇಪರ್ಗಳು ನಕಲಿ ಎಂಬುದು ತಿಳಿದುಬಂದಿದೆ. ದೂರಿನ ಆಧಾರದ ಮೇರೆಗೆ, ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 420 (ವಂಚನೆ ), 406 ,  465 (ನಕಲಿ) ಅಡಿ ಘನ್ಸೋಲಿ ಪ್ರದೇಶದ ನಿವಾಸಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಸಂಬಂಧ ಇದುವರೆಗೆ ಯಾರನ್ನೂ ಬಂಧಿಸಿಲ್ಲ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಮಣಿಪುರ ಹಿಂಸಾಚಾರ : ಮತ್ತೆ ಮೂವರ ಸಾವು