Select Your Language

Notifications

webdunia
webdunia
webdunia
webdunia

ವಿಶೇಷ ಆರೋಗ್ಯ ವಿಮೆ ಘೋಷಿಸಿದ ಬೊಮ್ಮಾಯಿ

webdunia
ಬೆಂಗಳೂರು , ಭಾನುವಾರ, 4 ಡಿಸೆಂಬರ್ 2022 (13:42 IST)
ಬೆಂಗಳೂರು : ವಿಕಲಚೇತನರ ದಿನಾಚರಣೆ ಕಾರ್ಯಕ್ರಮದಲ್ಲಿ ದಿವ್ಯಾಂಗ ಮಕ್ಕಳಿಗೆ 5 ಲಕ್ಷ ರೂ.ಗಳ ವಿಶೇಷ ಆರೋಗ್ಯ ವಿಮೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.

2022ರ ವಿಶ್ವ ವಿಕಲಚೇತನರ ದಿನಾಚರಣೆ ಅಂಗವಾಗಿ ವಿಕಲಚೇತನ ಹಾಗೂ ಹಿರಿಯ ನಾಗರೀಕರ ಸಬಲೀಕರಣ ನಿರ್ದೇಶನಾಲಯವತಿಯಿಂದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬೊಮ್ಮಾಯಿ, ನನ್ನೆಲ್ಲ ದೇವರ ಮಕ್ಕಳಿಗೆ ನಮಸ್ಕಾರ. ಸರ್ಕಾರ ನೀಡುವ ಮನೆಗಳಲ್ಲಿ ದಿವ್ಯಾಂಗರಿಗೆ 3% ಮೀಸಲಿಡುತ್ತೇವೆ.

ವಿಕಲಚೇತನ ಮಕ್ಕಳಿಗೆ ನೀಡುವ ಟ್ರೈಸೈಕಲ್ಗೆ ಹೆಚ್ಚುವರಿಯಾಗಿ 28 ಕೋಟಿ ರೂ. ಬಿಡುಗಡೆ ಮಾಡಿ, 2,000 ಸೈಕಲ್ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದಿದ್ದಾರೆ. 


Share this Story:

Follow Webdunia kannada

ಮುಂದಿನ ಸುದ್ದಿ

ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುತ್ತೇವೆ: ಕುಮಾರಸ್ವಾಮಿ