Webdunia - Bharat's app for daily news and videos

Install App

ಮಕ್ಕಳಾಗಿರಲಿಲ್ಲ, ಲಾಯರ್ ಕರೆಸಿದ್ರು, ಈಗ ಏನಾಯ್ತೋ ಗೊತ್ತಿಲ್ಲ: ಅಳಿಯ ಪ್ರತಾಪ್ ಸಾವಿಗೆ ಬಿಸಿ ಪಾಟೀಲ್ ಭಾವುಕ

Krishnaveni K
ಮಂಗಳವಾರ, 9 ಜುಲೈ 2024 (11:12 IST)
ಬೆಂಗಳೂರು: ಅಳಿಯ ಪ್ರತಾಪ್ ಸಾವಿನ ಬಗ್ಗೆ ಮಾಜಿ ಸಚಿವ ಬಿಸಿ ಪಾಟೀಲ್ ಭಾವುಕರಾಗಿ ಪ್ರತಿಕ್ರಿಯಿಸಿದ್ದಾರೆ. ಮಕ್ಕಳಾಗಿರಲಿಲ್ಲ ಎನ್ನುವ ಕೊರಗಿತ್ತು ಈಗ ಯಾಕೆ ಹೀಗೆ ಮಾಡಿಕೊಂಡರೋ ಗೊತ್ತಿಲ್ಲ ಎಂದಿದ್ದಾರೆ.

ನಮಗೆ ಗಂಡು ಮಗನಂತೇ ಇದ್ದ. ಉಪಾಹಾರ ಸೇವಿಸಿದ ಪ್ರತಾಪ್ ಊರಿಗೆ ಹೋಗಿ ಬರುತ್ತೇನೆಂದು ಹೋಗಿದ್ದ. ಹೀಗೆ ಹೇಳಿ ಹೋದವರು ವಿಷ ಸೇವಿಸಿದ್ದಾರೆ. ಹೀಗೆ ಯಾಕೆ ಮಾಡಿದರೋ ಆ ದೇವರಿಗೇ ಗೊತ್ತು. ಮಕ್ಕಳಾಗಿರಲಿಲ್ಲ ಎಂಬ ಕೊರಗಿತ್ತು. ಸರೋಗಸಿ ಮೂಲಕ ಮಗು ಪಡೆಯಲು ಲಾಯರ್ ನ ಕರೆಸಿದ್ರು. ಅಷ್ಟರಲ್ಲಿ ಹೀಗೆಲ್ಲಾ ಆಗಿದೆ ಎಂದು ಬೇಸರಪಟ್ಟುಕೊಂಡಿದ್ದಾರೆ.

ಇಂದು ಪ್ರತಾಪ್ ಸ್ವಗ್ರಾಮ ದಾವಣಗೆರೆ ಜಿಲ್ಲೆಯ ಕತ್ತಲಗೆರೆ ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಅವರು ಹೇಳಿದ್ದಾರೆ. ಪಾಟೀಲ್ ವ್ಯವಹಾರಗಳಿಗೂ ಪ್ರತಾಪ್ ಜೊತೆಯಾಗಿದ್ದರಂತೆ. ಆದರೆ ಮಕ್ಕಳಿರಲಿಲ್ಲ ಎಂಬಕ ಕೊರಗಿತ್ತು. ಬಹುಶಃ ಇದೇ ಕಾರಣಕ್ಕೆ ವಿಪರೀತ ಕುಡಿತದ ಚಟ ಅಂಟಿಸಿಕೊಂಡಿದ್ದರು, ಖಿನ್ನತೆಗೊಳಗಾಗಿದ್ದರು ಎನ್ನಲಾಗುತ್ತಿದೆ.

ಅಳಿಯನ ಸಾವಿನ ಆಘಾತದಿಂದ ಬಿಸಿ ಪಾಟೀಲ್ ಮತ್ತು ಕುಟುಂಬಸ್ಥರು ಆಘಾತಕ್ಕೀಡಾಗಿದ್ದಾರೆ. ಮಾಧ್ಯಮಗಳ ಮುಂದೆ ಮಾತನಾಡುವಾಗ ಬಿಸಿ ಪಾಟೀಲ್ ತೀರಾ ಭಾವುಕರಾಗಿ ಕಂಡುಬಂದರು. ಬಿಸಿ ಪಾಟೀಲ್ ಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆ ಪೈಕಿ ಸೌಮ್ಯ ಪಾಟೀಲ್ ಪತಿ ಪ್ರತಾಪ್.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಉಪಜಾತಿಗಳ ಪಟ್ಟಿಗೆ ಸಂಬಂಧಿಸಿ ಆಕ್ಷೇಪಣೆಗೆ ಇನ್ನಷ್ಟು ಕಾಲಾವಕಾಶ ಕೊಡಿ: ವಿ.ಸುನೀಲ್‍ಕುಮಾರ್

ಭಾರತಾಂಬೆಗೆ ನಮಿಸಿದ್ದಕ್ಕೆ ಡಿಕೆ ಶಿವಕುಮಾರ್ ಕ್ಷಮೆ ಕೇಳಬೇಕೇ: ಆರ್ ಅಶೋಕ್

ಮೇಘಸ್ಫೋಟದಿಂದ ಸುಧಾರಿಸುತ್ತಿಕೊಳ್ಳುತ್ತಿರುವ ಜಮ್ಮು ಕಾಶ್ಮೀರಕ್ಕೆ ಮತ್ತೇ ಶಾಕ್‌

ಉಚ್ಛಾಟನೆಗೆ ಹೆದರಿ ಡಿಕೆ ಶಿವಕುಮಾರ್ ಕ್ಷಮೆ ಯಾಚಿಸಿದ್ರು: ಜೆಡಿಎಸ್ ಲೇವಡಿ

Dharmasthala: ಪೊಲೀಸರ ಮುಂದೆ ಗೋಗೆರೆದ ಚಿನ್ನಯ್ಯ ಹೇಳಿದ್ದೇನು

ಮುಂದಿನ ಸುದ್ದಿ
Show comments