Select Your Language

Notifications

webdunia
webdunia
webdunia
webdunia

ಬಿಬಿಎಂಪಿ ವಾರ್ಡ್​ ಸಂಖ್ಯೆ 243 ಅಲ್ಲ 225!

ಬಿಬಿಎಂಪಿ ವಾರ್ಡ್​ ಸಂಖ್ಯೆ 243 ಅಲ್ಲ 225!
bangalore , ಶನಿವಾರ, 5 ಆಗಸ್ಟ್ 2023 (18:44 IST)
BBMP ವಾರ್ಡ್‌ಗಳ ಸಂಖ್ಯೆಯನ್ನು 243ರಿಂದ 225ಕ್ಕೆ ಇಳಿಸಿ ಸರ್ಕಾರ ಶುಕ್ರವಾರ ಅಧಿಸೂಚನೆ ಹೊರಡಿಸಿದೆ. 2021ರ ಜ.29ರಂದು BBMP ಕೌನ್ಸಿಲರ್ಸ್‌ ಸಂಖ್ಯೆಯನ್ನು 243ಕ್ಕೆ ನಿಗದಿಪಡಿಸಿ ಅಧಿಸೂಚನೆ ಹೊರಡಿಸಲಾಗಿತ್ತು. ಇದನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಾಪಸ್‌ ಪಡೆದುಕೊಳ್ಳಲಾಗಿದೆ.
 
ಬಿಬಿಎಂಪಿ ಅಧಿನಿಯಮ 2020ರ 7ನೇ ಪ್ರಕರಣದಂತೆ ಅಧಿಕಾರ ಚಲಾಯಿಸಿ, ತತ್‌ ಕ್ಷಣದಿಂದ ಜಾರಿಗೆ ಬರುವಂತೆ ಕಾರ್ಪೊರೇಟರ್‌ಗಳ ಸಂಖ್ಯೆಯನ್ನು 225ಕ್ಕೆ ನಿಗದಿಪಡಿಸಲಾಗಿದೆ. ಬಿಬಿಎಂಪಿ ವಾರ್ಡ್‌ಗಳ ಪುನರ್ ವಿಂಗಡಿಸಲು ಮುಖ್ಯ ಆಯುಕ್ತರ ನೇತೃತ್ವದ ಆಯೋಗವನ್ನು ಸರ್ಕಾರ ಜೂನ್23ರಂದು ಪುನರ್ ರಚಿಸಿತ್ತು. ಹೈಕೋರ್ಟ್‌ ಆದೇಶದಂತೆ 12 ವಾರಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಲಾಗಿತ್ತು.ಈ ಸಮಿತಿ ಜೂನ್ 25ರಂದು ಮೊದಲ ಸಭೆ ನಡೆಸಿತ್ತು. ನಂತರ ಪ್ರಕ್ರಿಯೆಗಳು ಆಗಿರಲಿಲ್ಲ. ವಾರ್ಡ್‌ಗಳ ಸಂಖ್ಯೆ ಕಡಿಮೆ ಮಾಡಬೇಕೇ? ಹೆಚ್ಚು ಮಾಡಬೇಕೇ ಎಂಬ ಬಗ್ಗೆ ಚರ್ಚೆಗಳಾಗುತ್ತಿದ್ದವು. ಈ ಮಧ್ಯೆ ಸಚಿವ ರಾಮಲಿಂಗಾರೆಡ್ಡಿ ಅವರು, ಬಿಜೆಪಿಯವರು ಕಾಂಗ್ರೆಸ್‌ಗೆ ಅನ್ಯಾಯ ಮಾಡಿ ವಾರ್ಡ್ ವಿಂಗಡಣೆ ಮಾಡಿದೆ. ಕೆಲವು ಅನಗತ್ಯ ವಾರ್ಡ್‌ಗಳಿವೆ. ವಾರ್ಡ್‌ಗಳ ಸಂಖ್ಯೆ 225 ಆಗಬಹುದು ಎಂದು ಹೇಳಿದ್ದರು. ಇದೀಗ ಅದರಂತೆಯೇ ವಾರ್ಡ್‌ಗಳ ಪುನರ್‌ವಿಂಗಡಣೆ ಆಯೋಗದ ಶಿಫಾರಸು ಇಲ್ಲದೆಯೇ ವಾರ್ಡ್‌ಗಳ ಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

HDK ಪ್ರೆಸ್​​ಮೀಟ್​​​.. ಸಚಿವರಿಗೆ ಟೆನ್ಷನ್​​.. ಟೆನ್ಷನ್​​​..!