ರಾಜಧಾನಿ ಬೆಂಗಳೂರಿನಲ್ಲಿ ರಸ್ತೆಗಳ ಎಂದರೆ ಬರಿ ಗುಂಡಿಗಳಿಂದ ಕುಡಿದ ರಸ್ತೆ ಗುಂಡಿಗಳೆಂದು ಭಾಸವಾಗುತ್ತದೆ..ಅದರಿಂದ ಆಗಿವ ಅಪಗಾತ ಅನಾಹುತಗಳೆ ನೆನಪಾಗುತ್ತವೆ , ಆದರೆ ಇವುಗಳನ್ನು ತಪ್ಪಿಸಲ ಬಿಬಿಎಂಪಿ ಉತ್ತಮ ಉಪಾಯ ಮಾಡಿತ್ತು. ಆಧುನಿಕವಾಗಿ ಟೆಕ್ನಾಲಜಿ ಬಳಸಿ ಬೆಂಗಳೂರಿನಲ್ಲಿ ರಸ್ತೆ ನಿರ್ಮಾಣ ಕೂಡ ಮಾಡಿದೆ. ಆದ್ರೆ ಇದೀಗಾ ಈ ಕಾಮಗಾರಿ ಕಳಪೆ ಪಟ್ಟಿಗೆ ಸೇರಲು ಮುಂದಾಗಿದೆ. ಮಹಾನಗರಿ ಬೆಂಗಳೂರಿನ ರಸ್ತೆಗುಂಡಿಗಳಿಂದಾಗಿ ಜನರು ಆತಂಕದಲ್ಲಿಯೇ ರಸ್ತೆಗೆ ಇಳಿಯುತ್ತಾರೆ. ಇನ್ನು ಮಳೆ ಬಂದರಂತೂ ರಸ್ತೆಯಲ್ಲಿಯ ಗುಂಡಿಗಳು ಕಾಣಿಸೋದೇ ಇಲ್ಲ. ಪರಿಣಾಮ ರಸ್ತೆಗುಂಡಿಗಳಿಂದಾಗಿ ಸವಾರರು ಪ್ರಾಣ ಕಳೆದುಕೊಂಡಿರುವ ಉದಾಹರಣೆಗಳಿವೆ. ಅದಕ್ಕೆಂದೇ ದೊಡ್ಡದಾಗಿ ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ವಿನೂತನ ಟೆಕ್ನಾಲಜಿ ಬಳಸಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರಸ್ತೆ ನಿರ್ಮಾಣ ಮಾಡೋಕೆ ಬಿಬಿಎಂಪಿ ಮುಂದಾಗಿತ್ತು.
ಅದರಂತೆ ಹಳೆಯ ಮದ್ರಾಸ್ ರಸ್ತೆಯಲ್ಲಿ ಪ್ರಯೋಗ ಮಾಡಿ ಉದ್ಘಾಟನೆ ಸಹ ಮಾಡಿದರು. ಉದ್ಘಾಟನೆಯಾಗಿ ಇನ್ನು 10 ದಿನವಾಗಿಲ್ಲ , ಅಷ್ಟು ಬೇಗ ರೋಡ್ ಗಡಗಡ ಅಂತ ಅಳ್ಳಾಡಕ್ಕೆ ಶುರುವಾಗಿದೆ. ಇದು ಎಂಥ ಕಾಮಗಾರಿಯೆಂದು ಜನರಿಗೆ ಬಿಬಿಎಂಪಿಯ ಕೆಲಸ ತೋರಿಸುತ್ತಿೆದೆ. ಬಿಬಿಎಂಪಿಯ ಕಳಪೆ ಕಾಮಗಾರಿ ಕಂಡ ಜನರು ಬೇಸತ್ತು ಹೋಗಿದ್ದಾರೆ. ಅದಿಕಾರಿಗಳು ಹೊಸದಾಗಿ ಪ್ರಯತ್ನ ಮಾಡುತ್ತಿರುವುದು ನಮಗೆಲ್ಲ ಖುಷಿ. ಆದ್ರೆ ಅದನ್ನು ಸರಿಯಾದ ರೀತಿಯಲ್ಲಿ ಮಾಡಬೇಕು. ಕೋಟಿ ಕೋಟಿ ವ್ಯಚ್ಚಮಾಡಿ ಕಾಮಗಾರಿ ನಿರ್ವಹಿಸುತ್ತಾರೆ ಆದ್ರೆ ಅದು ಸರಿಯಾಗಿ ತಿಂಗಳೂ ಸಹ ಬಾಳಿಕೆ ಬರುವುದಿಲ್ಲ. ಬಿಬಿಎಂಪಿ ಅದಿಕಾರಿಗಳು ಕೇವಲ ಆಶ್ವಾಸನೆ ಕೊಡೋದು ಮಾತ್ರ ಗೊತ್ತು ಎಂದು ಬೇಸರ ವ್ಯಕ್ತಪಡಿಸಿದರು.
ಟ್ಟಾರೆ ಹೊಸಾ ಪ್ಪಯತ್ನ ಮಾಡ್ತಿದೆ, ಆದ್ರೆ ಅದು ಸಹ ಕಳಪೆ ಕಾಮಗಾರಿ ಲಿಸ್ಟ್ ಕೆಳಗೆ ಬರುವ ಸಾಧ್ಯತೆಗಳು ಹೆಚ್ಚಾಗಿದೆ. ಇದನ್ನು ಕಂಡ ಜನರು ಮಾತ್ರ ಬೇಸತ್ತುಹೋಗಿದ್ದಾರೆ. ಈ ಬಗ್ಹೆ ಅಧಿಕಾರಿಗಳನ್ನು ಕೇಳಿದರೆ ಒಂದಲ್ಲ ಒಂದು ನೆಪ ಹೇಳಿ ತಪ್ಪಿಸಿಕೊಳ್ಳುತ್ತಿದ್ದಾರೆ.