Select Your Language

Notifications

webdunia
webdunia
webdunia
webdunia

ಬೆಂಗಳೂರಿಗರಿಗೆ ಇನ್ಮುಂದೆ ಗಾರ್ಬೇಜ್ ಟ್ಯಾಕ್ಸ್

ಬೆಂಗಳೂರಿಗರಿಗೆ ಇನ್ಮುಂದೆ ಗಾರ್ಬೇಜ್ ಟ್ಯಾಕ್ಸ್
ಬೆಂಗಳೂರು , ಬುಧವಾರ, 2 ಫೆಬ್ರವರಿ 2022 (19:41 IST)
ಬೆಂಗಳೂರು ಮಂದಿಗೆ ಕರೆಂಟ್ ಬಿಲ್‌ ಜತೆ ಗಾರ್ಬೆಜ್ ಯೂಸರ್ ಫೀ ಹೊಡೆತ ಬೀಳೋದು ಪಕ್ಕ ಆಗ್ತಿದೆ. ಮನೆ ಮನೆಯಿಂದ ಕಸ ಸಂಗ್ರಹಣೆ ಮಾಡುತ್ತಿರುವ ಬಿಬಿಎಂಪಿ, ಕಸ ನಿರ್ವಹಣೆಗೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡ್ತಿದೆ. ಇದೀಗ ಕಸ ನಿರ್ವಹಣೆಗೆ ಆದಾಯ ಕ್ರೂಢೀಕರಣಕ್ಕೆ ಪ್ಲ್ಯಾನ್ ಮಾಡಿರೋ ಬಿಬಿಎಂಪಿ ಇದೀಗ ಕಸ ಸಂಗ್ರಹಣೆಗೆ ಬಿಲ್​ ನೀಡಲು ಮುಂದಾಗಿದೆ. ಬೆಂಗಳೂರಿಗರಿಗೆ ಕರೆಂಟ್​ ಬಿಲ್​ ಜೊತೆ ಕಸದ ಬಿಲ್​ ಕೊಡುವ ಬಗ್ಗೆ ಚಿಂತನೆ ನಡೆಸಿದೆ.
ಬೆಂಗಳೂರು ಜನ ಸದ್ಯಕ್ಕೆ ವರ್ಷಕ್ಕೊಮ್ಮೆ ಪ್ರಾಪರ್ಟಿ ಟ್ಯಾಕ್ಸ್ ಕಟ್ಟುವ ವೇಳೆಯೇ ಗಾರ್ಬೆಜ್ ಸೆಸ್ ಕಟ್ಟುತ್ತಿದ್ದಾರೆ. ಆದ್ರೂ ಬಿಬಿಎಂಪಿಗೆ ಸೆಸ್ ಹಣ ಕಸ ನಿರ್ವಹಣೆಗೆ ಸಾಕಾಗುತ್ತಿಲ್ಲವೆಂದು ಬಿಬಿಎಂಪಿ ಇನ್ನು ಮುಂದೆ ಪ್ರತಿ ತಿಂಗಳು ಮನೆ ಮನೆಗಳಿಂದ ಗಾರ್ಬೆಜ್ ಟ್ಯಾಕ್ಸ್ ವಸೂಲಿ ಮಾಡಲು ಮುಂದಾಗಿದೆ. ಪ್ರತಿ ತಿಂಗಳು 40 ಕೋಟಿ ಸಂಗ್ರಹವಾಗುವ ನಿರೀಕ್ಷೆ ಇದೆ. ಇದರಿಂದ ಕಸದ ಗುತ್ತಿಗೆದಾರರಿಗೆ ಬಿಲ್, ಪೌರಕಾರ್ಮಿಕರಿಗೆ ಸಂಬಳ ನೀಡಲು ಅನುಕೂಲವಾಗಲಿದೆ.
ಇನ್ನು ಈ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಮಾತನಾಡಿದ್ದು ಕಸ ಶುಲ್ಕ ವಿಚಾರವಾಗಿ ಹಳೇ ನಿಯಮಗಳೇ ಇರುತ್ತೆ. ಯಾವುದೇ ರೀತಿಯ ಬದಲಾವಣೆ ಸದ್ಯಕ್ಕೆ ಮಾಡಿಲ್ಲ. ಗಾರ್ಬೆಜ್ ಸೆಸ್ ಬಗ್ಗೆ ಯಾವುದೇ ಚರ್ಚೆ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
 
ಕಸದೂರು ಬಿಂಗೀಪುರಕ್ಕೆ ಕೈಕೊಟ್ಟ ಬಿಬಿಎಂಪಿ; ಭರವಸೆಯಾಗಿಯೇ ಉಳಿದ ಕಸಪೀಡಿತ ಹಳ್ಳಿಗಳು
 
ಕಸದ ಶುಲ್ಕಕ್ಕೆ ಸಂಭಂದಪಟ್ಟಂತೆ ಈಗಿರುವ ನಿಯಮವಳಿಗಳೆ ಮುಂದುವರೆಯಲಿವೆ. ಅದ್ರಲ್ಲಿ ಯಾವುದೇ ಬದಲಾವಣೆ ಇಲ್ಲ. ಮುಂದಿನ ದಿನಗಳಲ್ಲಿ ಜನರ ಅಭಿಪ್ರಾಯ ಸಂಗ್ರಹಸಿ ಅಭಿವೃದ್ಧಿ ಮಾಡಲು ಹೊರಟಿದ್ದೇವೆ ಎಂದ್ರು. ಇನ್ನು ತಿಂಗಳ ಖರ್ಚಿನ ಜೊತೆಗೆ ಇದೀಗ ಕಸದ ಬಿಲ್​ ಕಟ್ಬೇಕು ಅಂದ್ರೆ ನಿಜಕ್ಕೂ ಕಷ್ಟವಾಗುತ್ತೆ ಅಂತಾರೆ ಜನ ಸಾಮಾನ್ಯರು.

Share this Story:

Follow Webdunia kannada

ಮುಂದಿನ ಸುದ್ದಿ

ದಾಖಲೆ ಬೆಲೆ ಕಂಡ ರೇಷ್ಮೆ ಬೆಳೆ