Select Your Language

Notifications

webdunia
webdunia
webdunia
webdunia

ಪೊಲೀಸ್ ವಾಹನವನ್ನೇ ಕದ್ದ ಖದೀಮ!

ಪೊಲೀಸ್ ವಾಹನವನ್ನೇ ಕದ್ದ ಖದೀಮ!
ಧಾರವಾಡ , ಬುಧವಾರ, 2 ಫೆಬ್ರವರಿ 2022 (10:31 IST)
ಧಾರವಾಡ: ಪೊಲೀಸರೆಂದರೆ ಕಳ್ಳ ಖದೀಮರಿಗೆ ಭಯವಿರುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಖದೀಮ ಪೊಲೀಸ್ ಠಾಣೆ ಎದುರು ನಿಲ್ಲಿಸಿದ್ದ ಪೊಲೀಸರ ವಾಹನವನ್ನೇ ಕಳ್ಳತನ ಮಾಡಿದ್ದಾನೆ!

ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿತ್ತು. ಪೊಲೀಸರು ಬೊಲೆರೋ ವಾಹನ ಬಳಸಿ ಕೀ ವಾಹನದಲ್ಲೇ ಬಿಟ್ಟು ಠಾಣೆಯೆದುರು ನಿಲ್ಲಿಸಿ ತೆರಳಿದ್ದರು.

ಇದನ್ನು ಗಮನಿಸಿದ ಆರೋಪಿ ನಾಗಪ್ಪ ವಾಹನ ಸಮೇತ ಹಾವೇರಿಗೆ ಪರಾರಿಯಾಗಿದ್ದಾನೆ. ಆದರೆ ತಕ್ಷಣವೇ ಪೊಲೀಸರ ಗಮನಕ್ಕೆ ಇದು ಬಂದಿದ್ದು, ಹಿಂಬಾಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇ- ಪಾಸ್‌ಪೋರ್ಟ್ ಘೋಷಣೆ