Publish Date: Sun, 06 Feb 2022 (16:54 IST)
Updated Date: Sun, 06 Feb 2022 (17:35 IST)
ರಾಜ್ಯದಲ್ಲಿ ಹಿಜಬ್ ವಿಚಾರದ ಗೊಂದಲದ ನಡುವೆ ತನ್ನ ವ್ಯಾಪ್ತಿಯ ಎಲ್ಲಾ ಕಾಲೇಜುಗಳಿಗೆ ಯೂನಿಫಾರ್ಮ್ ನೀಡಿಕೆಗೆ ಬಿಬಿಎಂಪಿ ಮುಂದಾಗಿದೆ. ಶಿಕ್ಷಣಾಧಿಕಾರಿಗಳ ಸೂಚನೆ ಮೇರೆಗೆ, ಯಾವೆಲ್ಲಾ ಕಾಲೇಜುಗಳಲ್ಲಿ ಯೂನಿಫಾರ್ಮ್ ನೀಡಿಲ್ಲವೋ, ತಕ್ಷಣವೇ ನೀಡುವಂತೆ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಶಿಕ್ಷಣಾಧಿಕಾರಿಗಳು ಸೂಚನೆ ನೀಡಿದ್ದಾರೆ.
ಅದರ ಬೆನ್ನಲ್ಲೇ ಯಾವ ಕಾಲೇಜಿಗೆ ಯೂನಿಫಾರ್ಮ್ ತಲುಪಿಲ್ಲವೋ ಅಂಥಹ ಕಾಲೇಜುಗಳ ಪಟ್ಟಿ ಸಿದ್ದಪಡಿಸಿ, ಕಾಲೇಜುಗಳಿಗೆ ಸಮವಸ್ತ್ರ ನೀಡಲು ಬಿಬಿಎಂಪಿ ಚಾಲನೆ ನೀಡಿದೆ