Select Your Language

Notifications

webdunia
webdunia
webdunia
webdunia

ಬಿಬಿಎಂಪಿ ಆಸ್ತಿಗಳನ್ನು ಮತ್ತೊಮ್ಮೆ ಸರ್ವೆ ಮಾಡಲು ಬಿಬಿಎಂಪಿ ಸಿದ್ದ

BBMP is ready to once again survey the assets of BBMP
bangalore , ಸೋಮವಾರ, 13 ಜೂನ್ 2022 (19:31 IST)
ಬಿಬಿಎಂಪಿ ತನ್ನ ಎಂಟು ವಲಯದ ಬಿಬಿಎಂಪಿ ಆಸ್ತಿಗಳನ್ನು ಮತ್ತೊಮ್ಮೆ ಸರ್ವೆ ಮಾಡಲು ಮುಂದಾಗಿದೆ. ಬಿಬಿಎಂಪಿ ಜೋನ್ನಲ್ಲಿರುವ ಭೂಮಾಪಕ ಅಧಿಕಾರಿಗಳಿಂದ ಸರ್ವೆಯನ್ನು ಮಾಡಿಸಲಾಗುವುದು ಎನ್ನಲಾಗಿದೆ. ಬಿಬಿಎಂಪಿಗೆ ಬಿಡಿಎಯಿಂದ ಹಸ್ತಾಂತರವಾಗಿರುವ ಬಡಾವಣೆ ಮತ್ತು ಹಸ್ತಾಂತರ ಹಂತದಲ್ಲಿರುವ ಬಡಾವಣೆಯಲ್ಲಿ ಬಿಬಿಎಂಪಿ ಮತ್ತು ಬಿಡಿಎ ಜಂಟಿಯಾಗಿ ಆಸ್ತಿಯನ್ನು ಸರ್ವೆ ಮಾಡಲಿದೆ ಎಂದು ಬಿಬಿಎಂಪಿ ಜಂಟಿ ಆಯುಕ್ತ ಡಾ. ಹರೀಶ್ ಕುಮಾರ್ ತಿಳಿಸಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾವಿರಾರು ಕೋಟಿ ಮೌಲ್ಯದ ಆಸ್ತಿಯು ಒತ್ತುವರಿಯಾಗಿದೆ. ಬಿಬಿಎಂಪಿ ತನ್ನ ಎಂಟು ವಲಯದಲ್ಲಿ ಸರ್ವೆಯನ್ನು ಮಾಡಿದ ಬಳಿಕ ಯಾವ ಆಸ್ತಿಯನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಆಸ್ತಿಯನ್ನು ಯಾರು ಸಂಪೂರ್ಣವಾಗಿ ಕಬಳಿಸಿದ್ದಾರೆ ತಿಳಿದು ಬರಲಿದೆ. ಬಿಬಿಎಂಪಿ ಆಸ್ತಿಗಳನ್ನು ಸರ್ವೆಯಾದ ಬಳಿಕವಷ್ಟೇ ಬಿಬಿಎಂಪಿ ಆಸ್ತಿ ಒತ್ತುವರಿ ತೆರವು ಕಾರ್ಯವನ್ನು ಮಾಡಲಾಗುತ್ತದೆ ಎಂದು ತಿಳಿಸಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್