ಬಿಬಿಎಂಪಿ ಅಧಿಕಾರಿಗಳಿಗೆ ನಾಚಿಕೆ ಇಲ್ಲಾ - ಹೆಚ್. ಡಿ. ಕೆ
Publish Date: Tue, 22 Mar 2022 (17:59 IST)
Updated Date: Tue, 22 Mar 2022 (15:01 IST)
ಬಿಬಿಎಂಪಿ ಕಸದ ಲಾರಿ ಡಿಕ್ಕಿಗೆ ಬಾಲಕಿ ಬಲಿ ಪ್ರಕರಣ ಸಂಬಂಧ ಮಾಜಿ ಸಿಎಂ ಹೆಚ್. ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ಟ್ವೀಟ್ ಮಾಡಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಬಿಬಿಎಂಪಿ ನಿರ್ಲಕ್ಷ್ಯದಿಂದ ಜನರ ಜೀವಕ್ಕೆ ಕಿಮ್ಮತ್ತಿಲ್ಲ.
ನೂರು ವರ್ಷ ಬದುಕ ಬಾಳಬೇಕಿದ್ದವಳು ಬಲಿಯಾಗಿದ್ದಾಳೆ, ಹೈಕೋರ್ಟ್ ಛೀಮಾರಿ ಹಾಕಿದ್ದರೂ ಬುದ್ಧಿ ಬಂದಿಲ್ಲ, ಎಂಜಿನಿಯರ್ಸ್ಗೆ ಜೈಲಿಗಟ್ಟುವ ಎಚ್ಚರಿಕೆಯನ್ನು ಕೋರ್ಟ್ ನೀಡಿದೆ. ಆದರೂ ಎಮ್ಮೆ ಚರ್ಮದ ಪಾಲಿಕೆ ಪಾಠ ಕಲಿತಿಲ್ಲ ಎಂದು HDK ಕಿಡಿ ಕಾರಿದ್ದಾರೆ. ಬಿಬಿಎಂಪಿ ಆಟಗಳಿಗೆ ಸರ್ಕಾರ ಸೀಟಿ ಹೊಡೆಯುತ್ತಿದ್ದು, ಭ್ರಷ್ಟರನ್ನ ಹೊರಹಾಕಿ ಬಿಬಿಎಂಪಿಯನ್ನು ಸ್ವಚ್ಚಗೊಳಿಸ ಬೇಕಿದೆ. ಅದಕ್ಷ ಅಧಿಕಾರಿಗಳನ್ನು ಪೋಷಣೆ ಮಾಡ್ತಿದೆ ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ
ಮುಂದಿನ ಸುದ್ದಿ