Webdunia - Bharat's app for daily news and videos

Install App

ಸಿಎಂ ಸಿದ್ದರಾಮಯ್ಯ ಮಾಡಿಸಲಿರುವ ಬಜೆಟ್ ನಿರೀಕ್ಷೆಯಲ್ಲಿರುವ ಬಿಬಿಎಂಪಿ

Webdunia
ಗುರುವಾರ, 6 ಜುಲೈ 2023 (20:51 IST)
ನಾಳೆ ಸಿಎಂ ಸಿದ್ದರಾಮಯ್ಯ ಮಂಡಿಸಲಿರುವ ಬಜೆಟ್ ಗೆ ಬಿಬಿಎಂಪಿ‌ಭಾರೀ ನಿರೀಕ್ಷೆಯಲ್ಲಿದೆ.ಕಳೆದ ಭಾರಿಗಿಂತ ಈ ಭಾರಿ ಹೆಚ್ಚುವರಿ ಅನುದಾನಕ್ಕೆ ಪಾಲಿಕೆ ಆಡಳಿತ ವರ್ಗ ಪ್ರಸ್ತಾವನೆ ಸಲ್ಲಿಸಿದೆ.ಬಿಜೆಪಿ ಸರ್ಕಾರದಲ್ಲಿ ನಿರಾಸೆಗೊಂಡಿದ್ದ ಬಿಬಿಎಂಪಿಗೆ ನಿರೀಕ್ಷಿತ ಪ್ರಮಾಣದ ಅನುದಾನ ಸಿಕ್ಕಿರಲಿಲ್ಲ.ಈ ಬಾರಿ ಜಾಕ್ ಪಾಟ್ ಹೊಡೆಯುತ್ತಾ ಸಿದ್ಧರಾಮಯ್ಯ ಮಂಡಿಸಲಿರೋ ಅಯವ್ಯಯದಲ್ಲಿ ಅನ್ನುವ ನಡುವೆ ನಿರೀಕ್ಷೆಯಲ್ಲಿ ಬಿಬಿಎಂಪಿ ಇದೆ.
 
ಕಳೆದ ಎರಡು ವರ್ಷದಿಂದ ಯಾವುದೇ ಹೊಸ ಯೋಜನೆ ಬಿಬಿಎಂಪಿ ಘೋಷಿಸಿಲ್ಲ.ಈ ಬಾರಿ ಹೊಸ ಯೋಜನೆ ಹೊಸ ಟೆಂಡರ್ ಕರೆಯುವ ನಿರೀಕ್ಷೆಯಲ್ಲಿರುವ ಪಾಲಿಕೆ ಇದೆ.ಹೊಸ ಯೋಜನೆಗಳಿಗೆ ಸಿದ್ಧತೆ ಮಾಡಿಕೊಳ್ಳಿ ಎಂದು ಮೌಖಿಕ ಸೂಚನೆ ಡಿಸಿಎಂ ಡಿಕೆ ಶಿವಕುಮಾರ್ ಕೊಟ್ಟಿದ್ದಾರೆ.ಬ್ಯ್ರಾಂಡ್ ಬೆಂಗಳೂರು ಬಗ್ಗೆ ಬಿಬಿಎಂಪಿ ಅಧಿಕಾರಿಗಳಿಗೆ ಭರವಸೆ  ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಕೆಶಿ ಕೊಟ್ಟಿದ್ದಾರೆ.ಈ ಬಾರಿ 4,200 ಕೋಟಿ ರೂಪಾಯಿ ಹೆಚ್ಚುವರಿ ಅನುದಾನ ಕೊಡುವಂತೆ ಪಾಲಿಕೆಯಿಂದ ಪ್ರಸ್ತಾವನೆ ಸಲ್ಲಿಸಿದ್ದಾರೆ.ಪುರ ಪಿತೃಗಳಿಲ್ಲದೆ ಹೊಸ ಯೋಜನೆ ಕೈಗೆತ್ತಿಕೊಳ್ಳೋಕೆ ಸಾಧ್ಯವಾಗದ ಸ್ಥಿತಿಯಲ್ಲಿ ಬಿಬಿಎಂಪಿ ಇದೆ.
 
ಬಿಜೆಪಿ ಅವಧಿಗಿಂತ ಹೆಚ್ಚುವರಿಯಾಗಿ 4200 ಕೋಟಿ ಅನುದಾನ ಪಾಲಿಕೆ ಕೋರಿದೆ.ಬಿಜೆಪಿ ಅವಧಿಯಲ್ಲಿ ಬಿಬಿಎಂಪಿಗೆ 3000 ಕೋಟಿ ಬಿಡುಗಡೆಯಾಗಿತ್ತು.ಕಳೆದ ಅವಧಿಯಲ್ಲಿ ಒಟ್ಟು 8 ಸಾವಿರ ಕೋಟಿಗೂ ಅಧಿಕ ಮೊತ್ತದ ಕಾಮಗಾರಿ  ಬಿಬಿಎಂಪಿ ನಡೆಸಿದೆ.ವೈಟ್ ಟಾಪಿಂಗ್, ರಸ್ತೆ ಗುಂಡಿ, ಹೊಸ ರಸ್ತೆ ಹೀಗೆ ಹಲವು ಕಾಮಗಾರಿಗೆ 6 ಸಾವಿರ ಕೋಟಿ ಪಾಲಿಕೆ ವೆಚ್ಚ ಮಾಡಿದೆ.ಮಳೆ ನಿರ್ವಹಣೆ, ರಾಜಕಾಲುವೆ, ಹೂಳೆತ್ತಲು ಬರೋಬ್ಬರಿ 1,800 ಕೋಟಿಗೂ ಅಧಿಕ ವೆಚ್ಚ ಮಾಡಿದೆ.ಸದ್ಯ ಗುತ್ತಿಗೆದಾರರಿಗೆ ಬರೋಬ್ಬರಿ 7,200 ಕೋಟಿ ರೂಪಾಯಿ ಬಾಕಿ ಬಿಬಿಎಂಪಿ ಉಳಿಸಿಕೊಂಡಿದೆ.ಆರ್ಥಿಕ ಸಮಸ್ಯೆ ನೀಗಿಸಿ ಅಂತ ಸರ್ಕಾರಕ್ಕೆ ಬಿಬಿಎಂಪಿ ಪ್ರಸ್ತಾವನೆ ಸಲ್ಲಿಸಿದೆ
 
ಇನ್ನೂ ಬಿಬಿಎಂಪಿ 'ಬಜೆಟ್' ನಿರೀಕ್ಷೆ  ನೋಡುವುದಾದ್ರೆ
 
• ಕಳೆದ ಅವಧಿಯಲ್ಲಿ 8 ಸಾವಿರ ಕೋಟಿಗೂ ಅಧಿಕ ಮೊತ್ತದ ಕಾಮಗಾರಿ
• ವೈಟ್ ಟಾಪಿಂಗ್, ರಸ್ತೆ ಗುಂಡಿ, ಹೊಸ ರಸ್ತೆ ಕಾಮಗಾರಿಗೆ 6 ಸಾವಿರ ಕೋಟಿ 
• ಮಳೆ ನಿರ್ವಹಣೆ, ರಾಜಕಾಲುವೆ, ಹೂಳೆತ್ತಲು 1,800 ಕೋಟಿಗೂ ಅಧಿಕ ವೆಚ್ಚ
• 7200 ಕೋಟಿ ರೂಪಾಯಿ ಗುತ್ತಿಗೆದಾರರಿಗೆ ಬಿಲ್ ಬಾಕಿ
• 3000 ಕೋಟಿ ಬಿಜೆಪಿ ಸರ್ಕಾರದಿಂದ ಅನುದಾನ
• 4,200 ಕೋಟಿ ಹೆಚ್ಚುವರಿ ಅನುದಾನಕ್ಕೆ ಪ್ರಸ್ತಾವನೆ
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಧರ್ಮಸ್ಥಳದಲ್ಲಿ ಎರಡನೇ ದಿನ ಹುಡುಕಾಡುತ್ತಿರುವ ಎಸ್ಐಟಿ ತಂಡಕ್ಕೆ ಸಿಕ್ಕಿದ್ದೇನು

ಧರ್ಮಸ್ಥಳ: 6 ಅಡಿ ಅಗೆದರೂ ಸಿಗದ ಕಳೆಬರಹ, ಕಾರ್ಯಚರಣೆಯಲ್ಲಿ ಬಿಗ್‌ಟ್ವಿಸ್ಟ್‌

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

ತೀರ್ಪಿಗಾಗಿ ಕಾಯುತ್ತಿದ್ದ ಪ್ರಜ್ವಲ್ ರೇವಣ್ಣಗೆ ಶಾಕ್: ಕೋರ್ಟ್ ಹೇಳಿದ್ದೇನು

ಧರ್ಮಸ್ಥಳ ಕೇಸ್: ಪೊಲೀಸರಿಗೂ ಸಂಕಷ್ಟ ತಂದಿಟ್ಟ ಎಸ್ಐಟಿ ಆರ್ಡರ್

ಮುಂದಿನ ಸುದ್ದಿ
Show comments