ಪಾಲಿಕೆ ವ್ಯಾಪ್ತಿಯಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಒಂಟಿ ಮನೆ ಯೋಜನೆಯಡಿ ಮನೆ ನಿರ್ಮಾಣಕ್ಕೆ ನೀಡಲಾಗುವ .5 ಲಕ್ಷ ಸಹಾಯಧನ ನೀಡುವ ಯೋಜನೆ ಇದೆ. ನಗರದಲ್ಲಿ 20*30 ಅಥವಾ ಕಡಿಮೆ ಅಳತೆಯ ಸ್ವಂತ ನಿವೇಶನ ಹೊಂದಿದ ಆರ್ಥಿಕ ಹಿಂದುಳಿದ ವರ್ಗಗಳ ಫಲಾನುಭವಿಗಳಿಗೆ ಮನೆ ನಿರ್ಮಾಣಕ್ಕೆ ಅನುಕೂಲವಾಗಲಿದೆ. ಆದರೆ, ನಿವೇಶನ ಖರೀದಿಸಲು ಆಗದ ಬಡವರು ಸ್ವಂತ ಮನೆ ಕಟ್ಟಲು ಆಗುತ್ತಿಲ್ಲ. ಹೀಗಾಗಿ, ಈ ಒಂಟಿಮನೆ ಯೋಜನೆಯಡಿ ನೀಡುವ ಸ್ವಲ್ಪ ಅನುದಾನವನ್ನು ಸರ್ಕಾರದ ವಿವಿಧ ಯೋಜನೆಗಳಡಿ ನಿರ್ಮಿಸಲಾದ ಮನೆಗಳ ಖರೀದಿಗೆ ನೀಡುವುದಕ್ಕೆ ತೀರ್ಮಾನಿಸಲಾಗಿದೆ ಎಂದರು.
ಈ ಯೋಜನೆಗೆ 'ಬೆಂಗಳೂರು ಅಮೃತೋತ್ಸವ ಮನೆ'(Bengaluru Amrit Mahotsav Mane) ಎಂದು ಹೆಸರಿಡಲು ತೀರ್ಮಾನಿಸಲಾಗಿದೆ. ಪಾಲಿಕೆಯಿಂದ 2022-23ನೇ ಸಾಲಿನಲ್ಲಿ ಒಂಟಿ ಮನೆ ಯೋಜನೆ ಜಾರಿಗಾಗಿ .100 ಕೋಟಿ ಮೀಸಲಿಡಲಾಗಿದೆ. ಇದರಡಿ ಒಟ್ಟು ಎರಡು ಸಾವಿರ ಫಲಾನುಭವಿಗಳಿಗೆ ಅನುಕೂಲ ಆಗಲಿದೆ. ಈ ಪೈಕಿ ಕಳೆದ 2-3 ವರ್ಷದ ಹಿಂದೆ ಅರ್ಜಿ ಸಲ್ಲಿಸಿ ಅನುದಾನ ನಿರೀಕ್ಷೆಯಲ್ಲಿದ್ದ 72 ಫಲಾನುಭವಿಗಳಿಗೆ ತಲಾ .5 ಲಕ್ಷ ಗಳಂತೆ ಅನುದಾನ ನೀಡಲು (3.6 ಕೋಟಿ ರು.) ತೀರ್ಮಾನಿಸಲಾಗಿದೆ. ಉಳಿದ ಅನುದಾನದಲ್ಲಿ ಹೊಸದಾಗಿ ಸರ್ಕಾರಿ ಪ್ರಾಧಿಕಾರಗಳಿಂದ ನಿರ್ಮಿಸಲಾಗುತ್ತಿರುವ ಅಪಾರ್ಚ್‌ಮೆಂಟ್‌ಗಳಲ್ಲಿ ಮನೆ ಖರೀದಿಸುವವರಿಗೆ ನೀಡಲು .20 ಕೋಟಿ ಮೀಸಲಿಡಲಾಗಿದೆ. ಇದರಿಂದ 400 ಮಂದಿಗೆ ಅನುಕೂಲವಾಗಲಿದೆ ಎಂದರು.