Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಕಲಬುರಗಿ ವಿವಿಗೆ ಬಸವೇಶ್ವರ ಹೆಸರಿಡಲು ತೀರ್ಮಾನ: ಸಚಿವ ರಾಯರೆಡ್ಡಿ

webdunia
ಗುರುವಾರ, 24 ಆಗಸ್ಟ್ 2017 (13:56 IST)
ಕಲಬುರಗಿ ವಿಶ್ವವಿದ್ಯಾಲಯಕ್ಕೆ ಬಸವೇಶ್ವರರ ಹೆಸರಿಡಲು ತೀರ್ಮಾನಿಸಲಾಗಿದೆ ಎಂದು ಉನ್ನತ ಶಿಕ್ಷಣ ಖಾತೆ ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಕಲಬುರಗಿ ವಿಶ್ವವಿದ್ಯಾಲಯದ ನಾಮಕರಣ ಪ್ರಕ್ರಿಯೆಗೆ ಇದೀಗ ತೆರೆ ಬಿದ್ದಿದೆ. ರಾಜ್ಯ ಸರಕಾರ ವಿಶ್ವವಿದ್ಯಾಲಯಕ್ಕೆ ಮಹಾ ಮಾನವತಾವಾದಿ ಬಸವೇಶ್ವರರ ಹೆಸರಿಡಲು ತೀರ್ಮಾನಿಸಿದೆ ಎಂದು ತಿಳಿಸಿದ್ದಾರೆ.
 
ವಿಶ್ವದಲ್ಲಿಯೇ ಮೊದಲ ಪಾರ್ಲಿಮೆಂಟ್ ಸ್ಥಾಪಿಸಿದ ಮಹಾಮಾನವತಾವಾದಿ ಬಸವೇಶ್ವರರ ಹೆಸರಿಡಲು ತೀರ್ಮಾನಿಸಿರುವುದು ಉತ್ತರ ಕರ್ನಾಟಕ ಭಾಗದ ಜನತೆಗೆ ಸಂತಸ ತಂದಿದೆ ಎಂದು ಉನ್ನತ ಶಿಕ್ಷಣ ಖಾತೆ ಸಚಿವ ಬಸವರಾಜ ರಾಯರೆಡ್ಡಿ ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ನಾಳೆಯೇ ಗ್ರಾಹಕರ ಕೈ ಸೇರಲಿದೆ 200 ರೂ. ನೋಟು