Select Your Language

Notifications

webdunia
webdunia
webdunia
webdunia

ನಾಳೆಯೇ ಗ್ರಾಹಕರ ಕೈ ಸೇರಲಿದೆ 200 ರೂ. ನೋಟು

webdunia
ನವದೆಹಲಿ , ಗುರುವಾರ, 24 ಆಗಸ್ಟ್ 2017 (13:43 IST)
ಹಲವು ದಿನಗಳಿಂದ ಎದ್ದಿರುವ 200 ರೂ. ನೋಟಿನ ಕುರಿತಾದ ಊಹಾಪೋಹಕ್ಕೆ ನಾಳೆ ತೆರೆ ಬೀಳಲಿದೆ. ನೋಟು ಬಿಡುಗಡೆಗೆ ಹಣಕಾಸು ಇಲಾಕೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ನೋಟಿನ ವಿನ್ಯಾಸವನ್ನ ರಿಸರ್ವ್ ಬ್ಯಾಂಕ್ ಬಹಿರಂಗಪಡಿಸಿದೆ.
  

ನೋಟಿನಲ್ಲಿ ರಿಸರ್ವ್ ಬ್ಯಾಂಕ್ ಗವರ್ನರ್ ಊರ್ಜಿತ್ ಪಟೇಲ್ ಸಹಿ ಜೊತೆ ಸಾಂಚಿ ಸ್ತೂಪದ ಚಿತ್ರ, ದೇಶದ ಸಂಸ್ಕೃತಿ ಬಿಂಬಿಸುವ ಚಿತ್ರದ ವಿಶಿಷ್ಟ ಲಕ್ಷಣದ ಜೊತೆ ಬ್ರೈಟ್ ಹಳದಿ ಬಣ್ಣ ಒಳಗೊಂಡಿರುತ್ತದೆ.

ಕಳೆದ ಮಾರ್ಚ್ ತಿಂಗಳಲ್ಲೇ ಹಣಕಾಸು ಇಲಾಖೆಯ ಅನುಮತಿ ಪಡೆದು ರಿಸರ್ವ್ ಬ್ಯಾಂಕ್ 200 ರೂ. ನೋಟು ಬಿಡುಗಡೆಗೆ ಸಿದ್ಧತೆ ನಡೆಸಿದೆ. ನೋಟಿನಲ್ಲಿ ಹಲವು ಭದ್ರತಾ ಲಕ್ಷಣಗಳನ್ನ ಒಳಪಡಿಸಲಾಗಿದ್ದು,ಹಲವು ಪರೀಕ್ಷೆಗೆ ಒಳಪಡಿಸಲಾಗಿದೆ.

ನವೆಂಬರ್`ನಲ್ಲಿ ಪ್ರಧಾನಿ ನರೇಂದ್ರಮೊದಿ ನೋಟ್ ಬ್ಯಾನ್ ಘೋಷಣೆ ಮಾಡಿದ ಬಳಿಕ ರಿಸರ್ವ್ ಬ್ಯಾಂಕ್ ಘೋಷಿಸಿದ 4ನೇ ಹೊಸ ನೋಟು ಇದಾಗಿದ್ದು, ನೋಟ್ ಬ್ಯಾನ್ ಬಳಿಕ ಉಂಟಾಗಿರುವ ಚಿಲ್ಲರೆ ಸಮಸ್ಯೆಗೆ ಈ ಹೊಸ ನೋಟು ಪರಿಹಾರ ನೀಡಲಿದೆ ಎನ್ನಲಾಗಿದೆ.

ಮಾಹಿತಿ: ಎನ್`ಡಿಟಿವಿ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಗಣಪತಿ ಕೇಸ್ ಸಿಬಿಐಗೆ ವಹಿಸ್ಬೇಕು, ಸಿಎಂ ರಾಜೀನಾಮೆ ನೀಡ್ಬೇಕು: ಬಿಎಸ್‌ವೈ