Daily Horoscope

Select Your Language

Notifications

webdunia
webdunia
webdunia
webdunia

ಡಾ. ಅಂಬೇಡ್ಕರ್ ಅವರು ಕಾಲಾತೀತ ನಾಯಕ: ಬಸವರಾಜ ಬೊಮ್ಮಾಯಿ

Basavaraj bommai
ಬೆಂಗಳೂರು: ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಕಾಲಾತೀತ ನಾಯಕ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಬಸವರಾಜ ಬೊಮ್ಮಾಯಿ ಅವರು ಅಭಿಪ್ರಾಯಪಟ್ಟರು.
 
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಸಂವಿಧಾನ ಕರ್ತೃ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಜಯಂತ್ಯುತ್ಸವವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಲವರು ಕಾಲಕ್ಕೆ ಸೀಮಿತವಾದ ನಾಯಕರಿರುತ್ತಾರೆ. ಆದರೆ, ಅಂಬೇಡ್ಕರ್ ಅವರು ಹಾಗಲ್ಲ ಎಂದು ನುಡಿದರು.
 
ಮಹಾನ್ ಚಿಂತಕರು ಸದಾ ಜೀವಂತರಾಗಿರುತ್ತಾರೆ. ಅಂಥವರಲ್ಲಿ ಡಾ.ಅಂಬೇಡ್ಕರ್ ಅವರೂ ಒಬ್ಬರು ಎಂದು ತಿಳಿಸಿದರು. ಬುದ್ಧನ ಪ್ರೇರಣೆ, ಬಸವಣ್ಣನ ಸಮಾನತೆ ಇವೆರಡನ್ನೂ ಪಡೆದವರು ಡಾ. ಅಂಬೇಡ್ಕರ್ ಅವರು ಎಂದು ವಿಶ್ಲೇಷಿಸಿದರು. ಭಾರತಕ್ಕೆ ಸಮಾನತೆ, ಪ್ರಜಾಪ್ರಭುತ್ವ ಮತ್ತು ವ್ಯಕ್ತಿ ಸ್ವಾತಂತ್ರ್ಯವನ್ನು ಕೊಟ್ಟಿರುವ ಶ್ರೇಷ್ಠ ವ್ಯಕ್ತಿ ಬಾಬಾಸಾಹೇಬ ಅಂಬೇಡ್ಕರ್ ಅವರು ಎಂದು ವಿವರಿಸಿದರು.
ಸರ್ವಸ್ಪರ್ಶಿ, ಸರ್ವವ್ಯಾಪ್ತಿಯ ಸಂವಿಧಾನವನ್ನು ಅವರು ಕೊಟ್ಟಿದ್ದಾರೆ. ಬಾಬಾಸಾಹೇಬ ಅಂಬೇಡ್ಕರ್ ಅವರು ಮಾನವೀಯತೆ ಆಧಾರದಲ್ಲಿ ಸಾಮಾಜಿಕ ನ್ಯಾಯ, ಆರ್ಥಿಕ ಬಲ ನೀಡುವ ಸಂವಿಧಾನವನ್ನು ನೀಡಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು. ಅಂಬೇಡ್ಕರರ ಹೆಸರಿನಲ್ಲಿ ನಿರಂತರ ಅನ್ಯಾಯ ಮಾಡುವವರ ಕುರಿತು ಜನರಿಗೆ ಜಾಗೃತಿ ಮೂಡಿಸಬೇಕಿದೆ ಎಂದು ಅವರು ತಿಳಿಸಿದರು.

 

ಡಾ.ಅಂಬೇಡ್ಕರ್ ಅವರು ನಮ್ಮ ಅಸ್ಮಿತೆ- ಛಲವಾದಿ ನಾರಾಯಣಸ್ವಾಮಿ

ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ಅಂಬೇಡ್ಕರರ ಜನ್ಮದಿನವನ್ನು ದಲಿತರು ಮಾತ್ರ ಕೊಂಡಾಡಬೇಕೇ ಎಂದು ಪ್ರಶ್ನಿಸಿದರು. ಅಂಬೇಡ್ಕರ್ ಅವರು ನಮ್ಮ ಅಸ್ಮಿತೆ. ನಮ್ಮ ಬೆಳಕು; ನಮಗೆ ದಾರಿದೀಪ ಎಂದು ಕೊಂಡಾಡುತ್ತೇವೆ ಎಂದು ತಿಳಿಸಿದರು.
ಬಾಬಾಸಾಹೇಬರನ್ನು ಗೌರವಿಸುವಲ್ಲಿ ಬಿಜೆಪಿ ಮೊದಲ ಸ್ಥಾನದಲ್ಲಿದೆ ಎಂದು ಅವರು ವಿವರಿಸಿದರು. ಬಿಜೆಪಿ ಮೀಸಲಾತಿ ವಿರೋಧಿ; ಮೀಸಲಾತಿಯನ್ನು ಕಿತ್ತು ಬಿಡುತ್ತಾರೆ ಎಂದು ತಪ್ಪು ಮಾಹಿತಿ ಹರಡುತ್ತಾರೆ. ಮೀಸಲಾತಿ ರದ್ದು ಮಾಡುವುದಾದರೆ ನಾವು ಇಷ್ಟು ದಿನ ಯಾಕೆ ಕಾಯಬೇಕಿತ್ತು ಎಂದು ಕೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಕೆಲವೇ ಕ್ಷಣದಲ್ಲಿ ಬಿಹಾರ ಸಿಎಂ ನಿತೀಶ್ ಕುಮಾರ್‌ ರಾಜೀನಾಮೆ: ಉತ್ತರಾಧಿಕಾರಿ ಬಗ್ಗೆ ಹೆಚ್ಚಿದ ಕುತೂಹಲ