ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಎಲ್ಲಾ ವಿಚಾರದಲ್ಲಿ ಗೊಂದಲದ ಗೂಡಾಗಿದೆ.ಯಾವುದೇ ಪರಿಸ್ಥಿತಿ ನಿಭಾಯಿಸೋದು, ಯೋಜನೆ ಅನುಷ್ಠಾನ ತರೋದು ಸ್ಪಷ್ಟತೆವಿಲ್ಲ.ಆರ್ಥಿಕ ಹೊರೆ ಎಷ್ಟಿದೆ ಗೊತ್ತಿಲ್ಲ.ಬಸ್ ವ್ಯವಸ್ಥೆ ಅದ್ವಾನ ಆಗಿದೆ.ಬಸ್ ವ್ಯವಸ್ಥೆ ಇಲ್ಲದೆ ಸಮಸ್ಯೆ ಆಗಿದೆ.ಎಷ್ಟು ಜನ ಓಡಾಡ್ತಾರೆ ಅದಕ್ಕೆ ಪೂರಕ ಬಸ್ ಬಿಡಬೇಕು.70ಜನ ಓಡಾಡೋಕೆ 150 ಜನ ಓಡಾಡ್ತಿದ್ದಾರೆ.ಸಿಬ್ಬಂದಿಗಳು ನಿನ್ನೆ ಹೇಳಿದ್ರು, ಕೆಲಸ ಮಾಡೋ ವಾತಾವರಣ ಇಲ್ಲ ಅಂತ.ನಿಮ್ಮ ಸಂಬಳ ನೀವೇ ನೋಡಿಕೊಳ್ಳಿ ಅಂತ ಹೇಳಿದೆ ಅಂತಾ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ
ಅಕ್ಕಿ ವಿಚಾರದಲ್ಲಿ ಕೇಂದ್ರದ ಪಾಲು 5 k.g ಕೊಟ್ಟೇ ಕೊಡಲಿದೆ.5 k.g ಹೇಗೆ ತರಬೇಕು, ದಾಸ್ತಾನು ಎಷ್ಟಿದೆ ಅಂತ ನೋಡಿಕೊಳ್ಳಬೇಕು.ಕೇಂದ್ರದ ಮೇಲೆ ಗೂಬೆ ಕೂರಿಸೋದು ಸರಿಯಲ್ಲ.ಇದು ಮಾತಿಗೆ ತಪ್ಪಿದ ಸರ್ಕಾರ.ತಮ್ಮ ವೈಫಲ್ಯ ತಪ್ಪಿಸಿಕೊಳ್ಳಲು ಹೀಗೆ ಮಾಡ್ತಿದ್ದಾರೆ.ಇವರಿಗೆ ಜನ ಬಾಯಿಗೆ ಬಂದಂತೆ ಉಗೀತಿದ್ದಾರೆ.FCI ಬಳಿ ಸ್ಪಷ್ಟವಾಗಿ ಕೇಳಬೇಕಿತ್ತು.ಇವರಿಗೆ ಸರ್ಕಾರ ನಡೆಸುವ ಯೋಗ್ಯತೆ ಇಲ್ಲ.ಇದು ರಾಜಕೀಯ ಪ್ರೇರಿತ ಪ್ರತಿಭಟನೆ.ಮಾತು ಕೊಟ್ಟಂತೆ ನಡೆಯದಿರೋ ಬಗ್ಗೆ ಜನ ಮಾತಾಡ್ತಿದ್ದಾರೆ.