ಅಲ್ಪಸಂಖ್ಯಾತರ ಮಸೀದಿ, ದರ್ಗಾಕ್ಕೆ 10 ಕೋಟಿ ಕೊಟ್ಟಿದ್ದೆ: ಬಸವರಾಜ ಬೊಮ್ಮಾಯಿ

Krishnaveni K
ಬುಧವಾರ, 6 ನವೆಂಬರ್ 2024 (12:25 IST)
ಶಿಗ್ಗಾಂವಿ: ಅಲ್ಪಸಂಖ್ಯಾತರ ಮಸೀದಿ, ದರ್ಗಾ ಅಭಿವೃದ್ಧಿಗಾಗಿ ನಾನು ಮುಖ್ಯಮಂತ್ರಿಯಾಗಿದ್ದಾಗ 10 ಕೋಟಿ ರೂ. ಅನುದಾನ ನೀಡಿದ್ದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಶಿಗ್ಗಾಂವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಅಲ್ಪ ಸಂಖ್ಯಾತರ ಪರ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯನವರು ನಿಜವಾಗಿಯೂ ಅಲ್ಪ ಸಂಖ್ಯಾತರನ್ನು ರಾಜಕೀಯ ಲಾಭಕ್ಕೋಸ್ಕರ ಅಷ್ಟೇ ಬಳಸಿಕೊಳ್ತಿದ್ದಾರೆ ಎಂದು ವ್ಯಂಗ್ಯ ಮಾಡಿದ್ದಾರೆ. ನಾನು ಸಿಎಂ ಆಗಿದ್ದಾಗ ಅಲ್ಪ ಸಂಖ್ಯಾತರಿಗಾಗಿ 10 ಕೋಟಿ ರೂ. ಅನುದಾನ ನೀಡಿದ್ದೆ.

ಇದುವರೆಗೆ ಯಾವ ಸಿಎಂ ಕೂಡಾ ಕೊಟ್ಟಿರಲಿಲ್ಲ. ಆದರೆ ನಾನು ಅಲ್ಪ ಸಂಖ್ಯಾತರ ಮಸೀದಿ, ದರ್ಗಾ ಅಭಿವೃದ್ಧಿಗಾಗಿ 10 ಕೋಟಿ ರೂ. ಅನುದಾನ ನೀಡಿದ್ದೆ. ಆದರೆ ಅವರು ಅಧಿಕಾರಕ್ಕೆ ಬಂದ ತಕ್ಷಣ ಆ 10 ಕೋಟಿ ರೂ.ಗಳನ್ನು ಹಿಂಪಡೆದರು. ಅಂದರೆ ಅವರು ನಿಜವಾಗಿಯೂ ಅಲ್ಪಸಂಖ್ಯಾತರ ಪರವಾಗಿ ಇದ್ದಾರಾ ಎಂದು ಪ್ರಶ್ನೆ ಮಾಡಿದ್ದಾರೆ.

ಸಿದ್ದರಾಮಯ್ಯನವರು ಶಿಗ್ಗಾಂವಿಗೆ ನಾನು ಯಾವ ಅಭಿವೃದ್ಧಿ ಮಾಡಿದ್ದೇನೆ ಎಂದು ಕೇಳುತ್ತಾರೆ. ಒಮ್ಮೆ ಅವರು ಇಲ್ಲಿನ ರಸ್ತೆಗಳಲ್ಲಿ ಓಡಾಡುವಾಗ ನೋಡಲಿ. ಇಲ್ಲಿನ ರಸ್ತೆಗಳಷ್ಟು ಬೆಂಗಳೂರಿನ ರಸ್ತೆಗಳೂ ಚೆನ್ನಾಗಿಲ್ಲ ಎಂದು ತಮ್ಮ ಕಾಲದಲ್ಲಿ ಶಿಗ್ಗಾಂವಿ ಕ್ಷೇತ್ರಕ್ಕೆ ನೀಡಿರುವ ಅನುದಾನಗಳ ಮತ್ತು ಅಭಿವೃದ್ಧಿ ಕಾರ್ಯಗಳ ಪಟ್ಟಿಯನ್ನೇ ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಾಚ್ ಪ್ರಶ್ನೆಯೆತ್ತಿದ ನಾರಾಯಣಸ್ವಾಮಿಗೆ ಡಿಸಿಎಂ ಡಿಕೆ ಶಿವಕುಮಾರ್ ವ್ಯಂಗ್ಯ ಪ್ರತಿಕ್ರಿಯೆ

ಸರ್ದಾರ್ ದೆಹಲಿ ವಿಮಾನ ನಿಲ್ದಾಣದಲ್ಲಿ ಇಂಧನ ಕದಿಯುತ್ತಿದ್ದ ಇಬ್ಬರ ಬಂಧನ

ಭಾರತಕ್ಕೆ ಬಂದಿಳಿದ ಪುಟಿನ್,ಅಪ್ಪುಗೆಯೊಂದಿಗೆ ಸ್ವಾಗತಿಸಿದ ನರೇಂದ್ರ ಮೋದಿ

ಕೇಂದ್ರದ ಮಾಜಿ ಸಚಿವೆ ಸುಷ್ಮಾ ಪತಿ ಸ್ವರಾಜ್ ಕೌಶಲ್ ನಿಧನ, ಪುತ್ರಿ ಭಾವನಾತ್ಮಕ ಪೋಸ್ಟ್‌

ನಿಮ್ಮ ಸಮಯ ಸರಿ ಇದ್ದರೆ ವಾಚ್ ವಿಷಯ ಬರುತ್ತಿರಲಿಲ್ಲ: ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯ

ಮುಂದಿನ ಸುದ್ದಿ
Show comments