Select Your Language

Notifications

webdunia
webdunia
webdunia
webdunia

ನಿಮಗೆ ಖಾತ್ರಿಯಿಲ್ವಾ ನಾನು ತಪ್ಪು ಮಾಡಿಲ್ಲಾಂತ: ಜನರಿಗೆ ಪ್ರಶ್ನೆ ಮಾಡಿದ ಸಿದ್ದರಾಮಯ್ಯ

Siddaramaiah

Krishnaveni K

ಶಿಗ್ಗಾಂವಿ , ಮಂಗಳವಾರ, 5 ನವೆಂಬರ್ 2024 (20:17 IST)
ಶಿಗ್ಗಾಂವಿ: ಮುಡಾ ಹಗರಣದಲ್ಲಿ ತಮ್ಮ ಮೇಲೆ ಬಿಜೆಪಿಯವರು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದಿರುವ ಸಿಎಂ ಸಿದ್ದರಾಮಯ್ಯ, ನಾನೇನು ತಪ್ಪು ಮಾಡಿದ್ದೀನಿ ಅಂತ ಪೊಲೀಸರ ಹತ್ರ ಹೋಗಬೇಕು ಎಂದು ಹೇಳಿದ್ದಾರೆ.

ಶಿಗ್ಗಾಂವಿ ಉಪಚುನಾವಣೆ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಈ ಬಾರಿ ಶಿಗ್ಗಾಂವಿಯಲ್ಲಿ ಬಸವರಾಜ ಬೊಮ್ಮಾಯಿವರ ಪುತ್ರ ಸೋಲೋದು ನೂರು ಶೇಖಡಾ ಖಚಿತ. ಈ ಬಾರಿ ನಾವು ಮೂರೂ ಉಪಚುನಾವಣೆಯಲ್ಲಿ ಗೆಲ್ಲಲೇಬೇಕು. ಯಾಕೆಂದರೆ ಬಿಜೆಪಿಯವರು ಮಹಾನ್ ಸುಳ್ಳುಗಾರರು, ನನ್ನ ಮೇಲೇ ಸುಳ್ಳು ಕೇಸ್ ಹಾಕಿದ್ದಾರೆ.

ಈಗ ನಾನು ನಾಳೆ ಲೋಕಾಯುಕ್ತ ಪೊಲೀಸ್ ಎದುರು ವಿಚಾರಣೆಗೆ ಹೋಗಬೇಕು. ಎಂಥಾ ಪರಿಸ್ಥಿತಿ ಬಂತು ನೋಡಿ, ಒಂದು ಸುಳ್ಳು ಕೇಸ್ ನ ವಿಚಾರಣೆಗೆ ನಾನು ಪೊಲೀಸರ ಬಳಿ ಹೋಗಬೇಕಿದೆ. ನನ್ನನ್ನು ವಿಚಾರಣೆಗೆ ಕರೆದಿದ್ದಾರೆ. ಅದಕ್ಕಾಗಿಯಾದರೂ ನೀವು ಈ ಸಲ ಬಿಜೆಪಿಯನ್ನು ಸೋಲಿಸಬೇಕು ಎಂದು ಸಿಎಂ ಹೇಳಿದ್ದಾರೆ.

ಬಳಿಕ ಜನರತ್ತ ತಿರುಗಿ, ನಿಮಗೆ ಖಾತ್ರಿಯಿದೆಯಲ್ವಾ ನಾನು ತಪ್ಪು ಮಾಡಿಲ್ಲಾಂತ? ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಅಲ್ಲಿದ್ದ ಕೆಲವರು ಹೌದು ತಪ್ಪು ಮಾಡಿಲ್ಲ ಎಂದಿದ್ದಾರೆ. ನೋಡಿ ಇದಕ್ಕಾಗಿ ನೀವು 13 ನೇ ತಾರೀಖು ಮತಗಟ್ಟೆಗೆ ಹೋಗಿ ಪಠಾಣ್ ಹೆಸರಿನ ಮುಂದೆ ಗುಂಡಿ ಒತ್ತಿ ನಿಮ್ಮ ಮತ ಹಾಕಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಚುನಾವಣೆ ಬಂದಾಗ ಮಾತ್ರ ಕಾಂಗ್ರೆಸ್ ಗೆ ಚನ್ನಪಟ್ಟಣ ನೆನಪಾಗೋದು