ಬೆಂಗಳೂರು: ಬಸವನಗುಡಿಯ ಕಡಲೆಕಾಯಿ ಪರಿಷೆಗೆ ಕ್ಷಣಗಣನೆ ಶುರುವಾಗಿದ್ದು, ಈ ಬಾರಿ ಹೊಸ ನಿಯಮವೇನು ಇಲ್ಲಿದೆ ಸಂಪೂರ್ಣ ಮಾಹಿತಿ.
ಮಲ್ಲೇಶ್ವರಂ ಕಡಲೆ ಕಾಯಿ ಪರಿಷೆ ಮುಗಿಯುತ್ತಿದ್ದಂತೇ ಬಸವನಗುಡಿ ಕಡಲೆ ಕಾಯಿ ಪರಿಷೆ ಆರಂಭವಾಗುತ್ತದೆ. ಬೆಂಗಳೂರಿನ ಪಾರಂಪರಿಕ ಕಡಲೆಕಾಯಿ ಪರಿಷೆ ಈ ಬಾರಿ ನವಂಬರ್ 17 ರಿಂದ ಐದು ದಿನಗಳ ಕಾಲ ನಡೆಯಲಿದೆ.
ಈ ಬಾರಿ ಅದ್ಧೂರಿಯಾಗಿ ಕಡಲೆಕಾಯಿ ಪರಿಷೆ ನಡೆಯಲಿದೆ. ಹಾಸನಾಂಬೆ ಜಾತ್ರೆ, ಮೈಸೂರು ದಸರಾದಂತೆ ಬಸವನಗುಡಿ ಪರಿಷೆಯಲ್ಲೂ ವಿದ್ಯುತ್ ದೀಪಗಳ ಅಲಂಕಾರವಿರಲಿದೆ ಎಂದು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
ಇದರ ಜೊತೆಗೆ ಈ ಬಾರಿ ಕಡಲೆಕಾಯಿ ತಿಂದು ಎಲ್ಲೆಂದರಲ್ಲಿ ಕಸ ಬಿಸಾಕುವ ಜನರಿಗೆ ಹೊಸ ನಿಯಮದ ಎಚ್ಚರಿಕೆಯನ್ನೂ ನೀಡಲಾಗಿದೆ. ಕಸ ಬಿಸಾಕಿದವರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ದಂಡ ಹಾಕಲಿದೆ. ಅಲ್ಲದೆ, ಕಡಲೆಕಾಯಿ ಪರಿಷೆಗೆ ಬರುವವರು ಪ್ಲಾಸ್ಟಿಕ್ ಬ್ಯಾಗ್ ಬಳಸುವಂತಿಲ್ಲ. ಪ್ಲಾಸ್ಟಿಕ್ ಮುಕ್ತ ಜಾತ್ರೆ ಇದರ ಉದ್ದೇಶವಾಗಿದೆ. ಒಂದು ವೇಳೆ ಪ್ಲಾಸ್ಟಿಕ್ ಚೀಲ ಬಳಸಿದ್ರೆ 2 ಸಾವಿರ ರೂ.ವರೆಗೂ ದಂಡ ಬೀಳಲಿದೆ.