Select Your Language

Notifications

webdunia
webdunia
webdunia
Saturday, 12 April 2025
webdunia

ಆಗಸ್ಟ್ 15 ಕ್ಕೂ ಮೊದಲೇ ಸಿಎಂ ಬದಲಾಗ್ತಾರೆ: ಬಸನಗೌಡ ಯತ್ನಾಳ್

ಬಸನಗೌಡ ಪಾಟೀಲ್ ಯತ್ನಾಳ್
ಮೈಸೂರು , ಸೋಮವಾರ, 5 ಜುಲೈ 2021 (11:17 IST)
ಮೈಸೂರು: ಅನ್ ಲಾಕ್ ಆದ ಬೆನ್ನಲ್ಲೇ ನಾಡದೇವತೆ ಚಾಮುಂಡೇಶ್ವರಿ ದರ್ಶನ ಪಡೆದ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್, ಮತ್ತೆ ನಾಯಕತ್ವ ಬದಲಾವಣೆ ಬಗ್ಗೆ ಖಡಕ್ ಆಗಿ ಮಾತನಾಡಿದ್ದಾರೆ.

 

‘ಪಕ್ಷ ಉಳೀಬೇಕೆಂದರೆ ನಾಯಕತ್ವ ಬದಲಾಗಲೇಬೇಕು. ಆಗಸ್ಟ್ 15 ಕ್ಕೂ ಮೊದಲೇ ನಾಯಕತ್ವ ಬದಲಾಗಲಿದೆ. ಒಂದು ದಿನ ಮುಂದೆ ಹೋದರೂ ಇವರು 100 ಕೋಟಿ ಲೂಟಿ ಹೊಡೀತಾರೆ. ಎಷ್ಟು ಬೇಗ ಆಗುತ್ತೋ ಅಷ್ಟು ಬೇಗ ಈ ನಾಯಕತ್ವ ಹೋಗಬೇಕು’ ಎಂದು ಸಿಎಂ ಯಡಿಯೂರಪ್ಪ ಮತ್ತು ಪುತ್ರರ ವಿರುದ್ಧ ನೇರವಾಗಿ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.

ಇನ್ನು, ಸಿಎಂ ಯಡಿಯೂರಪ್ಪ ಪರ ಬ್ಯಾಟಿಂಗ್ ನಡೆಸುತ್ತಿರುವ ಮಠಾಧೀಶರ ಬಗ್ಗೆ ಯತ್ನಾಳ್ ಕಿಡಿ ಕಾರಿದ್ದಾರೆ. ಮಠಾಧಿಪತಿಗಳು ದಕ್ಷಿಣೆಗೆ ನೀಡಿದ್ದಾರೆಂದು ರಾಜಕೀಯ ಮಾಡಲು ಬರಬಾರದು. ಮಠಗಳು ಲವ್ ಜಿಹಾದ್ ವಿರುದ್ಧ ಹೋರಾಡಲಿ, ಧರ್ಮ ಕಾರ್ಯ ಮಾಡಲಿ. ಇದು ನಿಮ್ಮ ಕೆಲಸ ಅಲ್ಲ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೋವಿಡ್ನಿಂದ ಅನಾಥರಾದ 100 ಮಕ್ಕಳನ್ನು ದತ್ತು!