ಸಿದ್ದರಾಮಯ್ಯ ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟಬೇಕಂತ ಈಗ್ಲೇ ಆಸ್ತಿ ಮಾಡ್ಯಾರ: ಬಸನಗೌಡ ಪಾಟೀಲ್ ಯತ್ನಾಳ್

Krishnaveni K
ಗುರುವಾರ, 7 ನವೆಂಬರ್ 2024 (15:12 IST)
ವಿಜಯಪುರ: ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟುತ್ತೇನೆ ಎಂದಿದ್ದ ಸಿದ್ದರಾಮಯ್ಯ ಬಹುಶಃ ಅದಕ್ಕೋಸ್ಕರ ಈಗಲೇ ವಕ್ಫ್ ಗೆ ಆಸ್ತಿ ಮಾಡಿಕೊಡ್ತಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವ್ಯಂಗ್ಯ ಮಾಡಿದ್ದಾರೆ.

ವಿಜಯಪುರದಲ್ಲಿ ವಕ್ಫ್ ಹೋರಾಟ ಸಭೆಯಲ್ಲಿ ಮಾತನಾಡಿದ ಅವರು ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ನಾವೆಲ್ಲಾ ಹಿಂದೂಗಳು ಒಗ್ಗಟ್ಟಾಗಿ ಕುಂತೆವು ಅಂದ್ರ ಯಾರೂ ಏನೂ ಮಾಡಕ್ಕಾಗಲ್ಲ. ವಕ್ಫ್ ಗೆ ಆಸ್ತಿ ಬರೆದು ಕೊಟ್ಟೂ ಕೊಟ್ಟೂ ಈಗ ಪಾಕಿಸ್ತಾನದಷ್ಟಾಗಿದೆ ಆಸ್ತಿ ಎಂದಿದ್ದಾರೆ.

‘ಸಿದ್ದರಾಮಯ್ಯನನ್ನು ನೋಡಿ ಮುಂದಿನ ಜನ್ಮ ಎಂದಿದ್ದರೆ ಮುಸ್ಲಿಮನಾಗಿ ಹುಟ್ಟುವೆ ಅಂತಾರ. ಬಹುಶಃ ಮುಂದಿನ ಜನ್ಮದಲ್ಲಿ ಅನುಭವಿಸಲು ಈಗಲೇ ವಕ್ಫ್ ಗೆ ಆಸ್ತಿ ಕೊಡುತ್ತಿದ್ದಾರೆ’ ಎಂದು ಯತ್ನಾಳ್ ವ್ಯಂಗ್ಯ ಮಾಡಿದ್ದಾರೆ. ‘ಹಿಂದೂ ದೇವಾಲಯಗಳಿಗೆ ಹೋದರೆ ಗರ್ಭಗುಡಿ ಬಳಿ ಹೋಗಲೂ ಹಿಂಜರಿಯುತ್ತಿದ್ದರು’ ಎಂದು ಟೀಕಿಸಿದ್ದಾರೆ.

‘ಅಂದು ಕುಂಕುಮ ಹಚ್ಚಿಸಿಕೊಳ್ಳಲು ನಿರಾಕರಿಸುತ್ತಿದ್ದ ಸಿದ್ದರಾಮಯ್ಯ ಈಗ ಕುಂಕುಮ ಹಚ್ಚಿಸಿಕೊಳ್ಳುತ್ತಿದ್ದಾನೆ. ವಿಜಯಪುರಕ್ಕೆ ಬಂದು ಎಂಬಿ ಪಾಟೀಲ್ ವಾಗ್ದೇವಿ ದೇಗುಲದ ಒಳಗೆ ಹೋಗಲ್ಲ ಎಂದು ಬಿಟ್ರು. ಈಗ ನೋಡಿ ವಾಗ್ದೇವಿ ಶಾಪದಿಂದಲೇ ಮುಡಾ ಹಗರಣದಲ್ಲಿ ಸಿಲುಕಿಕೊಂಡಿದ್ದಾರೆ. ಆದರೆ ವಿಜಯಪುರದಲ್ಲಿ ಮತಾಂಧ ಮೌಲ್ವಿ ಮನೆಗೆ ಹೋಗಿ ಹಲ್ಲು ಕಿರಿಯುತ್ತಾನೆ’ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಈ ಒಂದು ಕಾರಣಕ್ಕೆ ಸಿದ್ದರಾಮಯ್ಯ ಮೇಲೆ ರಾಹುಲ್ ಗಾಂಧಿಗೆ ಹೆಚ್ಚು ಒಲವು

ಪ್ರಿಯಕರನ ಜೊತೆ ಸೇರಿ ಗಂಡನ ಕೊಂದು ಡ್ರಮ್ ನಲ್ಲಿರಿಸಿದ್ದ ಮುಸ್ಕಾನ್ ಕತೆ ಏನಾಗಿದೆ ನೋಡಿ

ಯಡಿಯೂರಪ್ಪ ಅಂದೇ ಡಿಕೆ ಶಿವಕುಮಾರ್ ಭವಿಷ್ಯ ನುಡಿದಿದ್ದರು

ಅಯೋಧ್ಯೆಯಲ್ಲಿ ರಾರಾಜಿಸಲಿದೆ ರಘುವಂಶದ ಕೇಸರಿ ಧ್ವಜ: ಪ್ರಧಾನಿ ಮೋದಿ ಚಾಲನೆ

ರಾಜ್ಯದ ಸಿಎಂ ಕುರ್ಚಿ ಫೈಟ್ ಪರಿಹಾರಕ್ಕೆ ಈ ಒಂದು ಮೀಟಿಂಗ್ ಮೇಲೇ ಎಲ್ಲರ ಕಣ್ಣು

ಮುಂದಿನ ಸುದ್ದಿ
Show comments