Publish Date: Tue, 23 Apr 2024 (20:16 IST)
Updated Date: Tue, 23 Apr 2024 (20:20 IST)
ಮೈಸೂರು: ಏಯ್ ಯಾವ ಹನುಮ ಜಯಂತಿ, ಹನುಮು ಹುಟ್ಟಿದ ದಿನಾಂಕ ನಿನಗೆ ಏನಾದ್ರೂ ಗೊತ್ತಾ,, ಮತ್ತೆ ಊಟ ತಿನ್ಲಾ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೈಸೂರಿನ ಸಿದ್ದರಾಮನಹುಂಡಿಯಲ್ಲಿ ಇಂದು ನಾಟಿಕೋಳಿ ಊಟ ಸವಿಯುವಾಗ ಸಿದ್ದರಾಮಯ್ಯ ಅವರಲ್ಲಿ ಬೆಂಬಲಿಗನೊಬ್ಬ ಸರ್ ಇವತ್ತು ಹನುಮ ಜಯಂತಿ' ಎಂದು ಹೇಳಿದ್ದಾನೆ.
ಇದಕ್ಕೆ ಪ್ರತಿಕ್ರಿಯಿಸಿ ಸಿಎಂ ಸಿದ್ದರಾಮಯ್ಯ ಅವರು, ಏಯ್ ಯಾವ ಹನುಮ ಜಯಂತಿ, ಹನುಮು ಹುಟ್ಟಿದ ದಿನಾಂಕ ನಿನಗೆ ಏನಾದ್ರೂ ಗೊತ್ತಾ, ಮತ್ತೆ ಊಟ ಮಾಡು ತಿನ್ಲಾ ಏನಾಗಲ್ಲ ಎಂದು ಸಿಎಂ ನಾಟಿಕೋಳಿ, ಮುದ್ದೆ ಊಟ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ದುರಂಕಾರಿ ಸಿದ್ದು, ಹಿಂದು ವಿರೋಧಿ ಸಿದ್ದರಾಮಯ್ಯ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ.
ಈ ಹಿಂದೆ ಸಿದ್ದರಾಮಯ್ಯ ಅವರು ಮಾಂಸಾದೂಟ ಮಾಡಿ ದೇವಸ್ಥಾನಕ್ಕೆ ಹೋಗಿದ್ದಕ್ಕೆ ಚರ್ಚೆಗೆ ಕಾರಣವಾಗಿದ್ದರು. ಈ ವಿಚಾರವಾಗಿ ಪರ ವಿರೋಧ ಚರ್ಚೆಗಳು ನಡೆದವು.