Select Your Language

Notifications

webdunia
webdunia
webdunia
webdunia

ಬಾರ್ ಬೆಂಡಿಂಗ್ ಕೆಲಸ ಮಾಡುವ ಹುಡುಗನಿಗೆ ಪಿಯುಸಿಯಲ್ಲಿ 2ನೇ ರ್ಯಾಂಕ್!

ಬಾರ್ ಬೆಂಡಿಂಗ್ ಕೆಲಸ ಮಾಡುವ ಹುಡುಗನಿಗೆ ಪಿಯುಸಿಯಲ್ಲಿ 2ನೇ ರ್ಯಾಂಕ್!
bengaluru , ಭಾನುವಾರ, 19 ಜೂನ್ 2022 (14:00 IST)

ಗದಗ ಜಿಲ್ಲೆಯ ರೋಣ ತಾಲೂಕಿನ ನೆರೇಗಲ್ ಅನ್ನದಾನೇಶ್ವರ ಪಿಯು ಕಾಲೇಜ್ ವಿದ್ಯಾರ್ಥಿ ಶಿವರಾಜ್ ಡಿ ಪಿಯು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವ ಮೂಲಕ ಜಿಲ್ಲೆಯೆ ಹೆಮ್ಮೆ ಪಡುವಂತೆ ಮಾಡಿದ್ದಾನೆ..

ಪಿಯುಸಿ ಕಲಾ ವಿಭಾಗದಲ್ಲಿ 600 ಕ್ಕೆ 593 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಎರಡನೇ ರ್ಯಾಂಕ್ ಗಳಿಸಿದ್ದಾರೆ. ಇತಿಹಾಸ, ಅರ್ಥಶಾಸ್ತ್ರ, ಭೂಗೋಳಶಾಸ್ತ್ರ, ರಾಜ್ಯಶಾಸ್ತ್ರ ವಿಷಗಳಲ್ಲಿ ಶಿವರಾಜ್ ನೂರಕ್ಕೆ ನೂರು ಅಂಕ ಪಡೆದಿದ್ದಾನೆ. ಕನ್ನಡ 98, ಇಂಗ್ಲೀಷ್ 95 ಅಂಕ ಪಡೆದು ಕಲಾ ವಿಭಾಗದಲ್ಲಿ ಸಾಧನೆ ಮಾಡಿದ್ದಾರೆ.

ರಾಯಚೂರು ಮೂಲದ ಶಿವರಾಜ್ ಪಿಯು ವ್ಯಾಸಾಂಗಕ್ಕೆ ನೆರೇಗಲ್ ಅನ್ನದಾನೇಶ್ವರ ಪಿಯು ಕಾಲೇಜು ಸೇರಿಕೊಂಡಿದ್ರು. ಸೋದರ ಮಾವ ಲಿಂಗಪ್ಪ ಸೂಚನೆಯಂತೆ ನೆರೇಗಲ್ ಸೇರಿದ್ದ ಶಿವರಾಜ್ ಶ್ರೆದ್ಧೆಯಿಂದ ಕಲೆಯುತ್ತಿದ್ದಾರೆ. ಲಿಂಗಸಗೂರು ತಾಲೂಕಿನ ಯರಗಟ್ಟ ಗ್ರಾಮದಲ್ಲಿ ತಂದೆ ತಾಯಿ ಕೂಲ ಕೆಲಸ ಮಾಡ್ಕೊಂಡು ಜೀವನ ನಡೆಸ್ತಿದ್ರೆ ಓದಿನಲ್ಲಿ ಸಾಧನೆ ಮಾಡ್ಬೇಕು ಅನ್ನೋ ಹಂಬಲ ಹೊಂದಿರೋ ಶಿವರಾಜ್ ನೆರೇಗಲ್ ನಲ್ಲಿ ಇದ್ದು ಕಲೆಯುತ್ತಿದ್ದರು..

ಶಿವರಾಜ್ ಮೂಲ ರಾಯಚೂರು ಕಾಲೇಜು ಅಭ್ಯಾಸ ಮಾಡ್ತಿದ್ದ ಊರು ನೆರೇಗಲ್.. ಆದ್ರೆ, ಸದ್ಯ ಶಿವರಾಜ್ ಕೂಲಿ ಕೆಲಸಕ್ಕೆ ಅಂತಾ ತುಮಕೂರು ಸೇರಿದಾರೆ. ಏಳನೇ ಕ್ಲಾಸ್ ಇದ್ದಾಗಿನಿಂದಲೂ ಶಿವರಾಜ್ ದುಡಿದೇ ಕಲೀತಿರೋದಂತೆ. ತಿಂಗಳು ರಜೆಯಲ್ಲಿ ಕೆಲಸ ಮಾಡಿ ಉಳಿದ ಹಣವನ್ನೇ ವಿದ್ಯಾಭ್ಯಾಸಕ್ಕೆ ಶಿವರಾಜ್ ಬಳಸ್ತಾರೆ. ಪಿಯು ರಿಸರ್ಟ್ ಬರೋ ಹೊತ್ತಿಗೆ ಶಿವರಾಜ್ ಬಾರ್ ಬೆಂಡಿಂಗ್ ಕೆಲಸಕ್ಕೆ ಅಂತಾ ತುಮಕೂರು ತೆರಳಿದ್ರು.

ರ್ಯಾಂಕ್ ಬಂದಿರೋ ವಿಚಾರ ಶಿವರಾಜ್ ಗೆ ಫೋನ್ ಮೂಲಕ ತಿಳಿದಿದೆ. ಸಹ ಕೆಲಸಗಾರರಿಗೂ ವಿಷ್ಯ ತಿಳಿದಿದೆ, ಸ್ಥಳಕ್ಕೆ ಕೇಕ್ ತರೆಸಿದ್ದ ಗೌಂಡಿ, ಮೇಸ್ತ್ರಿಗಳು ಶಿವರಾಜ್ ಸಾಧನೆಯನ್ನ ಸಂಭ್ರಮಿಸಿದ್ದಾರೆ.‌

ಐಎಎಸ್ ಪರೀಕ್ಷೆ ಪಾಸ್ ಮಾಡ್ಬೇಕು ಅಂತಾ ಕನಸು ಕಾಣ್ತಿರೋ ಶಿವರಾಜ್ ಈಗಿನಿಂದಲೇ ತಯಾರಿ ನಡೆಸಿದಾರೆ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡಿಕೊಳ್ಳುತ್ತಿದ್ದಾರಂತೆ. ಐವರು ಸಹೋದರರು, ಮೂವರು ಸಹೋದರಿಯರ ಪೈಕಿ ಶಿವರಾಜ್ ಮೂರನೇಯವರು. ಅಣ್ಣ ಗಾರೆ ಕೆಲಸ ಮಾಡಿದ್ರೆ ತಂದೆ ತಾಯಿ ಕೂಲಿ ಮಾಡ್ತಾರೆ.. ಮೂರು ಎಕರೆ ಜಮೀನು ನಂಬ್ಕೊಂಡು ಜೀವನ ನಡೀತಿದೆ. ಯಾರಿಗೂ ಹೊರೆಯಾಗದೇ ಶಿಕ್ಷಣ ಪಡೆಯಬೇಕು ಅನ್ನೋದು ಶಿವರಾಜ್ ಛಲ.


Share this Story:

Follow Webdunia kannada

ಮುಂದಿನ ಸುದ್ದಿ

ಮುಂಗಾರು ಮಳೆಯಿಂದ ತತ್ತರಿಸುವ ಬಾಂಗ್ಲಾದೇಶ!